ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎಫ್‌ನಿಂದ ಶಸ್ತ್ರಾಸ್ತ್ರ ವಶ

Last Updated 6 ಫೆಬ್ರುವರಿ 2018, 19:14 IST
ಅಕ್ಷರ ಗಾತ್ರ

ಚಂಡೀಗಡ: ಇಲ್ಲಿನ ಗುರುದಾಸ್‌ಪುರ ವಲಯದ ಕಾಸ್ಸೊವಲ್‌ ಗಡಿ ಪ್ರದೇಶದ ಹೊರ ಠಾಣೆಯ ಬಳಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ವಶಪಡಿಸಿಕೊಂಡಿದೆ.

ಈ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಬಿಳಿ ಬಣ್ಣದ ಚೀಲದಲ್ಲಿಟ್ಟು, ನೆಲದಲ್ಲಿ ಹುದುಗಿಸಲಾಗಿತ್ತು. ಶ್ವಾನದ ನೆರವಿನಿಂದ ಚೀಲ ಪತ್ತೆ ಮಾಡಲಾಯಿತು ಎಂದು ಬಿಎಸ್‌ಎಫ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘6 ಮ್ಯಾಗಜಿನ್‌ ಜತೆ ಎಕೆ–47 ರೈಫಲ್‌ಗಳು, 250 ಸುತ್ತು ಗುಂಡುಗಳು, 2 ಪಿಸ್ತೂಲಿನ ಮ್ಯಾಗಜಿನ್‌, 6 ಕೈ ಬಾಂಬುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಬಿಎಸ್‌ಎಫ್‌ನ ಮಹಾ ನಿರ್ದೇಶಕ ರಾಜೇಶ್‌ ಶರ್ಮಾ ಹೇಳಿದ್ದಾರೆ.

ಇಲ್ಲಿನ ಭಾರತ–ಪಾಕಿಸ್ತಾನ ಗಡಿ ಪ್ರದೇಶದ ಬಳಿ ಅನುಮಾನಾಸ್ಪದ ಚಟುವಟಿಕೆ ಕಂಡಿದ್ದರಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT