Photos| ಸತತ ಮಳೆಗೆ ಹಂಪಿಯಲ್ಲಿ ಕುಸಿದು ಬಿದ್ದ ಮಂಟಪ
ಸತತ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನದ ಮಗ್ಗುಲಲ್ಲಿರುವ ಮಂಟಪ ಸೋಮವಾರ ಕುಸಿದು ಬಿದ್ದಿದೆ.ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಿರುವ ಈ ಮಂಟಪ ಸಂಪೂರ್ಣ ಕಲ್ಲಿನಿಂದಲೇ ಕಟ್ಟಲಾಗಿದೆ. ಮಂಟಪದ ಆಧಾರ ಹಾಗೂ ಚಾವಣಿಗೂ ಕಲ್ಲುಗಳನ್ನೇ ಉಪಯೋಗಿಸಲಾಗಿದೆ. ‘ಈ ವರ್ಷ ಉತ್ತಮ ಮಳೆಯಾಗಿದೆ. ನಾಲ್ಕು ದಿನಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಳೆಗೆ ನೆನೆದು ಈ ಪುರಾತನ ಮಂಟಪ ಕುಸಿದು ಬಿದ್ದಿರಬಹುದು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2020, 13:03 IST