ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

7

ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

Published:
Updated:

ವಿಜಯಪುರ: ನಗರದ ಆರಾಧ್ಯದೈವ ಸಿದ್ಧೇಶ್ವರ ಜಾತ್ರೆ ಅಂಗವಾಗಿ ಬಿ.ಎಂ.ಪಾಟೀಲ ಫೌಂಡೇಶನ್ ವತಿಯಿಂದ ಸೊಬಗಿನ ಸಂಕ್ರಾಂತಿ ರಾಜ್ಯ ಮಟ್ಟದ 5ನೇ ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.

ಜಿಲ್ಲೆಯ ಸಂಕ್ರಾಂತಿ ಸೊಬಗನ್ನು ಬೇರೆ ಪ್ರದೇಶಗಳಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ ಸ್ಪರ್ಧೆಯಲ್ಲಿ ರಾಜ್ಯ ಎಲ್ಲ ಜಿಲ್ಲೆಗಳ ಛಾಯಾಗ್ರಾಹಕರು ಪಾಲ್ಗೊಳ್ಳಬಹುದು. 

ಜ.12ರಿಂದ 16ರವರೆಗೆ ಜಾತ್ರೆ ನಡೆಯುವ ನಂದಿಕೋಲ ಮೆರವಣಿಗೆ, ಸಿಡಿಮದ್ದು ಪ್ರದರ್ಶನ, ಜಾನುವಾರು ಜಾತ್ರೆ, ಕುಸ್ತಿ ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದ ಚಿತ್ರ ತೆಗೆಯಬೇಕು. ಛಾಯಾಚಿತ್ರ 12 ಇಂಚು ಮತ್ತು 18 ಇಂಚು ಅಳತೆಯಲ್ಲಿ ಇರಬೇಕು. ಜ.31ರೊಳಗೆ ಛಾಯಾಚಿತ್ರ ಬಿ.ಎಂ.ಪಾಟೀಲ ಫೌಂಡೇಶನ್, ಡಾ.ಫ.ಗು.ಹಳಕಟ್ಟಿ ಭವನ, ಬಂಗಾರಮ್ಮ ಸಜ್ಜನ ಆವರಣ, ಬಿ.ಎಂ.ಪಾಟೀಲ ರಸ್ತೆ ವಿಜಯಪುರ ಇಲ್ಲಿಗೆ ಕಳುಹಿಸಬಹುದು.

ಛಾಯಾಗ್ರಾಹಕ ಗರಿಷ್ಠ ಆರು ಚಿತ್ರ ಕಳುಹಿಸಬಹುದು. ವಿಜೇತರಿಗೆ ಪ್ರಥಮ ₹ 20,000, ದ್ವಿತೀಯ ₹ 15,000, ತೃತೀಯ ₹ 10,000, ಹಾಗೂ ಎರಡು ಸಮಾಧಾನಕರ ₹ 5,000 ಹಾಗೂ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಮಾಹಿತಿಗೆ ರಮೇಶ ಚವ್ಹಾಣ ಮೊ.9611563508 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !