‘ಪ್ಲಾಸ್ಟಿಕ್‌ ನಿರ್ಮೂಲನೆ; ಜನರ ಪಾತ್ರ ಮುಖ್ಯ’

7

‘ಪ್ಲಾಸ್ಟಿಕ್‌ ನಿರ್ಮೂಲನೆ; ಜನರ ಪಾತ್ರ ಮುಖ್ಯ’

Published:
Updated:
Deccan Herald

ಬೆಂಗಳೂರು: ಪ್ಲಾಸ್ಟಿಕ್‌ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಹೇಳಿದರು.

ಯಲಹಂಕ ಸಮೀಪದ ಸಹಕಾರ ನಗರದಲ್ಲಿ ಬಸವ ಬಳಗದ ಆಶ್ರಯದಲ್ಲಿ 189ನೇ ತಿಂಗಳ ತಿಳಿವು ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಬಳಕೆ ಮಾಡುವುದನ್ನು ನಿಷೇಧಿಸುವ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು. ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಿತರಿಸುತ್ತಿರುವುದು ಕಂಡುಬಂದರೆ, ಸಂಬಂಧಪಟ್ಟವರಿಗೆ ದೂರು ನೀಡುವುದಾಗಿ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಹಸಿ ಮತ್ತು ಒಣಕಸವನ್ನಾಗಿ ವಿಂಗಡಿಸಿ, ಕಸದ ಗಾಡಿಗಳಿಗೆ ನೀಡುವ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಸವ ಬಳಗದ ಅಧ್ಯಕ್ಷ ಉದಯಶಂಕರ್ ನೆಜ್ಜೂರ್, ಕಾವೇರಿ ಸಮೂಹಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಂ.ದೇವರಾಜಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !