ವಿಜಯಪುರ: 71922 ಕುಟುಂಬಗಳಿಗೆ ‘ಉಜ್ವಲಾ’ ಸಂಪರ್ಕ

7

ವಿಜಯಪುರ: 71922 ಕುಟುಂಬಗಳಿಗೆ ‘ಉಜ್ವಲಾ’ ಸಂಪರ್ಕ

Published:
Updated:

ವಿಜಯಪುರ: ‘ಜಿಲ್ಲೆಯಾದ್ಯಂಥ 71922 ಬಡ ಕುಟುಂಬಗಳಿಗೆ ಕೇಂದ್ರದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಅಡುಗೆ ಅನಿಲದ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಬಿಪಿಸಿಎಲ್‌ನ ಜಿಲ್ಲಾ ನೋಡಲ್‌ ಅಧಿಕಾರಿ ಶಾಶ್ವತ್ ಶರ್ಮಾ ತಿಳಿಸಿದರು.

‘ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಈ ಯೋಜನೆ ಅನುಷ್ಠಾನಗೊಳಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ’ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿಜಯಪುರ ಜಿಲ್ಲೆಯಲ್ಲಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ 4.5 ಲಕ್ಷ ಕುಟುಂಬಗಳಿವೆ. ಇವುಗಳಲ್ಲಿ ಈಗಾಗಲೇ 3.5 ಲಕ್ಷ ಕುಟುಂಬಗಳು ಸ್ವತಃ ಎಲ್‌ಪಿಜಿ ಸಂಪರ್ಕ ಪಡೆದಿದ್ದವು. ಅಡುಗೆ ಅನಿಲ ಸಂಪರ್ಕ ಹೊಂದದ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರವೇ ಗ್ಯಾಸ್‌ ಸ್ಟೌ, ಸಿಲಿಂಡರ್ ಒದಗಿಸುತ್ತಿದೆ.

ಈ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ ಇದೂವರೆಗೂ 71922 ಕುಟುಂಬಗಳಿಗೆ ಸೌಲಭ್ಯದ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಕುಟುಂಬಗಳು ಸಹ ಅರ್ಜಿ ಸಲ್ಲಿಸಿ, ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಶಾಶ್ವತ್ ಶರ್ಮಾ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !