ಪೊಲೀಸರ ಸೋಗಿನಲ್ಲಿ ದಾಳಿ; ಗೃಹರಕ್ಷಕ ಬಂಧನ

ಭಾನುವಾರ, ಮೇ 26, 2019
30 °C

ಪೊಲೀಸರ ಸೋಗಿನಲ್ಲಿ ದಾಳಿ; ಗೃಹರಕ್ಷಕ ಬಂಧನ

Published:
Updated:

ಬೆಂಗಳೂರು: ಮನೆಯಲ್ಲಿ ಜೂಜಾಡುತ್ತಿದ್ದ ಯೋಗ ತರಬೇತುದಾರ ಆನಂದ್ ಹಾಗೂ ಅವರ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆವೊಡ್ಡಿ ₹83 ಸಾವಿರ ವಸೂಲಿ ಮಾಡಿದ ಆರೋಪದಡಿ ಗೃಹರಕ್ಷಕ ಕುಶಾಲ್ ಪವಾಡ್ ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕುಶಾಲ್, ಅತ್ತಿಬೆಲೆ ಠಾಣೆಯಲ್ಲಿ ಗೃಹರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಈ ಕೃತ್ಯಕ್ಕೆ ಸಹಕರಿಸಿದ್ದ ಸ್ನೇಹಿತರಾದ ಬಾಬು ಮತ್ತು ಅರುಣ್ ತಲೆಮರೆಸಿಕೊಂಡಿದ್ದಾರೆ.  

‘ಆನಂದ್ ಹಾಗೂ ಸ್ನೇಹಿತರು ಜೂಜಾಡುತ್ತಿದ್ದರು. ಖಾಕಿ ಸಮವಸ್ತ್ರ ಧರಿಸಿ ಸ್ನೇಹಿತರ ಜೊತೆಯಲ್ಲಿ ಮನೆಗೆ ನುಗ್ಗಿದ್ದ ಕುಶಾಲ್, ‘ನಾವು ಪೊಲೀಸರು. ನೀವೆಲ್ಲ ಅಕ್ರಮ ಚಟುವಟಿಕೆ ನಡೆಸುತ್ತಿದ್ದೀರಾ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಬೆದರಿಸಿದ್ದ’ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹೇಳಿದರು.

’ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳು, ಆನಂದ್ ಹಾಗೂ ಅವರ ಸ್ನೇಹಿತರನ್ನು ಒಟ್ಟಿಗೆ ಸೇರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ನಂತರ, ₹83 ಸಾವಿರ ನಗದು ಕಿತ್ತುಕೊಂಡಿದ್ದರು. ‘ಈ ವಿಷಯ ಯಾರಿಗಾದರೂ ಹೇಳಿದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ’ ಎಂದೂ ಬೆದರಿಕೆ ಹಾಕಿದ್ದರು’ ಎಂದರು.

ಬೈಕ್ ನಂಬರ್ ನೀಡಿದ ಸುಳಿವು: ‘ಆರೋಪಿಗಳ ಬಗ್ಗೆ ಅನುಮಾನಗೊಂಡಿದ್ದ ಆನಂದ್, ಅವರ ಹಿಂದೆಯೇ ಮನೆಯಿಂದ ಹೊರಗೆ ಓಡಿ ಹೋಗಿ ಬೈಕ್ ನೋಂದಣಿ ಸಂಖ್ಯೆ ಬರೆದಿಟ್ಟುಕೊಂಡಿದ್ದರು. ಮರುದಿನವೇ ಠಾಣೆಗೆ ಬಂದು ದೂರು ನೀಡಿದ್ದರು. ಬೈಕ್‌ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !