ಪೊಲೀಸ್‌ ಇಲಾಖೆ: 32 ಸಾವಿರ ಹುದ್ದೆ ಖಾಲಿ

7

ಪೊಲೀಸ್‌ ಇಲಾಖೆ: 32 ಸಾವಿರ ಹುದ್ದೆ ಖಾಲಿ

Published:
Updated:

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಒಟ್ಟು 1.26 ಲಕ್ಷ ಹುದ್ದೆಗಳಿದ್ದು, 31,694 ಹುದ್ದೆಗಳು ಖಾಲಿ ಉಳಿದಿವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಬಿಜೆಪಿಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದರು.

ಪ್ರತಿ ವರ್ಷ 4 ಸಾವಿರ ಪೊಲೀಸರು ನಿವೃತ್ತರಾಗುತ್ತಾರೆ. ಅದಕ್ಕನುಗುಣವಾಗಿ ನೇಮಕಾತಿ ನಡೆಯಬೇಕು. ಆದರೆ, 2008ರಿಂದ 2013ರವರೆಗೆ ಪೊಲೀಸ್‌ ನೇಮಕಾತಿ ನಡೆಯದ ಕಾರಣ ಇಷ್ಟೊಂದು ಹುದ್ದೆಗಳು ಖಾಲಿ ಇವೆ ಎಂದರು.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ 26,188 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿತ್ತು ಎಂದರು.

‘ಆರ್ಡರ್ಲಿ ಪದ್ಧತಿ ರದ್ದುಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇ ನಾನು ಗೃಹಸಚಿವನಾದ ಬಳಿಕ. ಅದಕ್ಕೆ ಬದಲಿಯಾಗಿ 373 ಅನುಯಾಯಿ ಹುದ್ದೆಗಳನ್ನು ಹೊಸತಾಗಿ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಈ ಪದ್ಧತಿ ಸಂಪೂರ್ಣ ಕೊನಗೊಳ್ಳಲಿದೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !