ನೀರವ್‌ ಹಸ್ತಾಂತರ ಪ್ರಕ್ರಿಯೆಗೆ ಒಪ್ಪಿಗೆ

5

ನೀರವ್‌ ಹಸ್ತಾಂತರ ಪ್ರಕ್ರಿಯೆಗೆ ಒಪ್ಪಿಗೆ

Published:
Updated:
ನೀರವ್‌ ಹಸ್ತಾಂತರ ಪ್ರಕ್ರಿಯೆಗೆ ಒಪ್ಪಿಗೆ

ಲಂಡನ್‌: ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರನ್ನು ಭಾರತಕ್ಕೆ ವಾಪಸ್‌ ಕರೆತರುವ ಪ್ರಕ್ರಿಯೆ ಆರಂಭಿಸಬಹುದು ಎಂದು ಬ್ರಿಟನ್‌ನ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವೀಸ್‌ (ಸಿಪಿಎಸ್) ತಿಳಿಸಿದೆ.

ಈ ವಿಷಯವನ್ನು ಸಿಪಿಎಸ್‌ ಭಾರತಕ್ಕೆ ತಿಳಿಸಿದೆ. ಸಿಬಿಐ ಈ ಬಗ್ಗೆ ಕೋರಿಕೆಯ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಈ ಅರ್ಜಿಗೆ ಬ್ರಿಟನ್‌ ಗೃಹ ಸಚಿವಾಲಯದ ಕಚೇರಿ ಅನುಮೋದನೆ ನೀಡಬೇಕು. ಬಳಿಕ ನೀರವ್‌ ಹಸ್ತಾಂತರಕ್ಕೆ ವಾರಂಟ್‌ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನೀರವ್‌ ಮೋದಿ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬ್ರಿಟನ್‌ನಲ್ಲಿ ಇರಬಹುದು ಅಥವಾ ಬ್ರಿಟನ್‌ನಿಂದ ತೆರಳಿರಬಹುದು. ಪ್ಯಾರಿಸ್‌ಗೆ ತೆರಳುವ ವಿಮಾನದಲ್ಲಿ ಅವರು ತೆರಳಿರುವ ಸಾಧ್ಯತೆ ಇದೆ. ನೀರವ್‌ ಮೋದಿ ಪತ್ತೆಯಾದರೆ ಈಗ ಸಿಪಿಎಸ್‌ ಸಲಹೆಯಂತೆ ವಾರಂಟ್‌ ಪಡೆದು ಬಂಧಿಸಬಹುದು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry