‘ಉಗ್ರರ ಸುರಕ್ಷಿತ ತಾಣ ನಿರ್ನಾಮ ಅಗತ್ಯ’

7

‘ಉಗ್ರರ ಸುರಕ್ಷಿತ ತಾಣ ನಿರ್ನಾಮ ಅಗತ್ಯ’

Published:
Updated:

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ದೀರ್ಘ ಕಾಲ ಶಾಂತಿ ನೆಲೆಸಲು ಪಾಕಿಸ್ತಾನದಲ್ಲಿರುವ ಉಗ್ರರ ಸುರಕ್ಷಿತ ತಾಣಗಳನ್ನು ನಿರ್ನಾಮ ಮಾಡುವ ಅಗತ್ಯ ಇದೆ ಎಂದು ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ಮತ್ತು ನ್ಯಾಟೊ ಪಡೆಯ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಆಸ್ಟಿನ್‌ ಮಿಲ್ಲರ್‌ ಹೇಳಿದ್ದಾರೆ.

ಅಫ್ಗಾನಿಸ್ತಾನದ ಸಮಸ್ಯೆ ಪರಿಹರಿಸಲು ಪಾಕಿಸ್ತಾನವು ಕೇವಲ ರಾಜತಾಂತ್ರಿಕವಾಗಿ ಮಾತ್ರವಲ್ಲ ಭದ್ರತೆಯ ದೃಷ್ಟಿಯಿಂದಲೂ ಸಹಕರಿಸಬೇಕು ಎಂದಿದ್ದಾರೆ.  ಪಾಕಿಸ್ತಾನವು ತಾಲಿಬಾನ್‌ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎಂದಿರುವ ಮಿಲ್ಲರ್‌, ಪಾಕಿಸ್ತಾನದಲ್ಲಿ ಸುಭದ್ರತೆ ಸೃಷ್ಟಿಯಾದರೆ ಅಫ್ಗಾನಿಸ್ತಾನದಲ್ಲೂ ಶಾಂತಿ ಪ್ರಕ್ರಿಯೆಗೆ ಪ್ರಯೋಜನವಾಗಲಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !