ಶನಿವಾರ, ಮೇ 15, 2021
29 °C

ಫಿಲಿಪ್ಪೀನ್ಸ್: ಮುಖ್ಯ ನ್ಯಾಯಮೂರ್ತಿ ಉಚ್ಛಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಿಲಾ: ಫಿಲಿಪ್ಪೀನ್ಸ್‌ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಮರಿಯಾ ಲೌರ್ಡ್ಸ್ ಸೆರೆನೊ ಅವರ ಉಚ್ಚಾಟನೆ ಆದೇಶವನ್ನು ಸುಪ್ರೀಂಕೋರ್ಟ್‌ನ 15 ನ್ಯಾಯಮೂರ್ತಿಗಳ ಪೀಠ ಸೋಮವಾರ ಎತ್ತಿ ಹಿಡಿದಿದೆ.  

ಈ ತೀರ್ಪು ಅಸಾಂವಿಧಾನಿಕ, ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತದೆ ಹಾಗೂ ದೇಶದ ದುರ್ಬಲ ಪ್ರಜಾಪ್ರಭು‌ತ್ವವನ್ನು ಪ್ರತಿನಿಧಿಸುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿವೆ. 

ಆದೇಶದ ಪರ 8 ಹಾಗೂ ವಿರುದ್ಧವಾಗಿ 6 ಮತ ಚಲಾವಣೆಯಾಗುವ ಮೂಲಕ ಉಚ್ಚಾಟನೆಯನ್ನು ಪೀಠವು ಎತ್ತಿಹಿಡಿದಿದೆ ಎಂದು ಕೋರ್ಟ್ ವಕ್ತಾರ ಥಿಯೋಡೊರ್ ಟೆ ತಿಳಿಸಿದ್ದಾರೆ. ಅಧ್ಯಕ್ಷ ರೊಡ್ರಿಗೊ ಡುಟೆಟ್ರೆ ಅವರು 90 ದಿನಗಳಲ್ಲಿ ಹೊಸ ಮುಖ್ಯನ್ಯಾಯಮೂರ್ತಿಯನ್ನು ನೇಮಿಸಲಿದ್ದಾರೆ. 

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಮರಿಯಾ ತಳ್ಳಿಹಾಕಿದ್ದಾರೆ. ಅಲ್ಲದೆ ಹುದ್ದೆಯಿಂದ ತಮ್ಮನ್ನು ತೆಗೆದುಹಾಕಿದ್ದರ ಸಾಂವಿಧಾನಿಕ ಔಚಿತ್ಯವನ್ನು ಅವರು ಪ್ರಶ್ನಿಸಿದ್ದಾರೆ. ಸಂಸತ್ತಿನಲ್ಲಿ ವಾಗ್ದಂಡನೆ ಮೂಲಕ ಮಾತ್ರ ತಮ್ಮನ್ನು ಉಚ್ಚಾಟಿಸಲು ಅವಕಾಶವಿದೆ. ಕೋರ್ಟ್‌ಗೆ ಈ ಅಧಿಕಾರ ಇಲ್ಲ ಎಂದಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು