ಸೋಮವಾರ, ಡಿಸೆಂಬರ್ 9, 2019
17 °C

ಮುಷರಫ್‌ ನಾಮಪತ್ರ ತಿರಸ್ಕೃತ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್‌ ಮುಷರಫ್‌ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮುಷರಫ್‌ ಅವರಿಗೆ 2013ರಲ್ಲಿ ಪೆಶಾವರ ಹೈಕೋರ್ಟ್‌ ಜೀವಿತಾವಧಿ ನಿಷೇಧ ಹೇರಿತ್ತು. 

ಖೈಬರ್‌ ಪ್ರಾಂತ್ಯದ ಉತ್ತರ ಛಿತ್ರಾಲ್‌ ಜಿಲ್ಲೆಯಿಂದ ಸ್ಪರ್ಧಿಸಲು 74 ವರ್ಷದ ಮುಷರಫ್‌ ನಾಮಪತ್ರ ಸಲ್ಲಿಸಿದ್ದರು.  ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೂನ್‌ 13ರಂದು ಖುದ್ದು ಹಾಜರಾಗುವಂತೆ ಸುಪ್ರೀಂಕೋರ್ಟ್‌ ತಿಳಿಸಿತ್ತು. ಆದರೆ ಮುಷರಫ್‌ ಹಾಜರಾಗಿರಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು