ಟ್ರಂಪ್‌–ಕಿಮ್‌ ನಡುವೆ ಐತಿಹಾಸಿಕ ಶೃಂಗ

7

ಟ್ರಂಪ್‌–ಕಿಮ್‌ ನಡುವೆ ಐತಿಹಾಸಿಕ ಶೃಂಗ

Published:
Updated:

ಸಿಂಗಪುರ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೋರಿಯಾ ಮುಖ್ಯಸ್ಥ ಕಿಮ್‌ ಜಾಂಗ್‌ ಉನ್‌ ಉಭಯ ನಾಯಕರು ಮಂಗಳವಾರ ತಮ್ಮ ಐತಿಹಾಸಿಕ ಶೃಂಗವನ್ನು ಶೀತಲ ಯುದ್ಧದ ವೈರಿಗಳ ನಡುವಿನ ಸಂಬಂಧಗಳ ಪ್ರಗತಿ ಎಂದು ಪ್ರಶಂಸಿಸಿದರು. ಆದರೆ, ಪ್ಯಾಂಗ್‌ಯಾಂಗ್‌ನಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಉತ್ತರ ಕೊರಿಯಾ ಸಮ್ಮತಿಸಿದೆಯಾದರೂ, ಸಂಪೂರ್ಣ ಒಪ್ಪಂದ ಮಾಡಿಕೊಂಡಿಲ್ಲ. 

ಸಿಂಗಪುರದ ಸೆಂತೋಸಾ ದ್ವೀಪದಲ್ಲಿರುವ ಕೆಪೆಲ್ಲಾ ಹೋಟೆಲ್‌ನಲ್ಲಿ ಈ ವಿಷಯ ಕುರಿತು ಇಬ್ಬರೂ ನಾಯಕರ ನಡುವೆ ಇದೇ ಮೊದಲ ಬಾರಿಗೆ ಮಾತುಕತೆ ನಡೆಯಿತು.

ಇಡೀ ವಿಶ್ವವೇ ಬೆರಗುಗಣ್ಣಿನಿಂದ ಬಹು ನಿರೀಕ್ಷೆಯಲ್ಲಿ ನೋಡುತ್ತಿದ್ದ ಈ ಶೃಂಗದಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಉತ್ತರ ಕೋರಿಯಾ ಒಪ್ಪಂದಕ್ಕೆ ಬರದಿದ್ದರೂ, ಸಮ್ಮತಿಯನ್ನಷ್ಟೇ ಸೂಚಿಸಿದೆ. ಈ ಮೂಲಕ ಒಪ್ಪಂದದ ಬಗ್ಗೆ ಅನುಮಾನಗಳು ಉಳಿದಿವೆ.

ಬೆಳಿಗ್ಗೆ ಶೃಂಗದಲ್ಲಿ ಭೇಟಿಯಾದ ವಿಶ್ವದ ಅತ್ಯಂತ ಶಕ್ತಿಯುತ ಪ್ರಜಾಪ್ರಭುತ್ವದ ಉಭಯ ದೇಶಗಳ ನಾಯಕರು ಪರಸ್ಪರ ಹಸ್ತಲಾಘವ ಮಾಡಿ, ನಗೆ ಬೀರಿದ್ದರು. ಐತಿಹಾಸಿಕ ಭೇಟಿ ಯಶಸ್ಸು ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು.

‘ಕೊರಿಯಾ ಪ್ಯಾಂಗ್‌ಯಾಂಗ್‌ನಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ’ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್‌ ಜಾಂಗ್‌ ಉನ್‌ ಸಮ್ಮತಿಸಿದ್ದಾರೆ. ಈ ಮೂಲಕ ‘ಉತ್ತರ ಕೊರಿಯಾ ಅಣ್ವಸ್ತ್ರ ಕಾರ್ಯಾಚರಣೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕು’ ಎಂಬ ಅಮೆರಿಕದ ಬಹು ಕಾಲದ ಬೇಡಿಕೆಗೆ ಕೊಂಚಮಟ್ಟಿನ ಸಮಾಧಾನ ನೀಡಿದೆ.

ಉತ್ತರ ಕೊರಿಯಾ ಸಂಪೂರ್ಣವಾಗಿ ಅಣ್ವಸ್ತ್ರ ಬಳಕೆ ತ್ಯಜಿಸಲು ಒಪ್ಪಿದರೆ ಅದಕ್ಕೆ ನಿಶ್ಚಿತವಾಗಿ ‘ವಿಶಿಷ್ಟ’ ಭದ್ರತೆ ಒದಗಿಸಲು ಸಿದ್ಧ ಎಂದು ಅಮೆರಿಕ ಮಾತುಕತೆಯ ಮುನ್ನಾ ದಿನವಾದ ಸೋಮವಾರ ಭರವಸೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !