ಅಲ್ ಕೈದಾ, ಐಎಸ್‌ ಅಂಗಸಂಸ್ಥೆಗಳಿಗೆ ನಿಷೇಧ

7

ಅಲ್ ಕೈದಾ, ಐಎಸ್‌ ಅಂಗಸಂಸ್ಥೆಗಳಿಗೆ ನಿಷೇಧ

Published:
Updated:

ನವದೆಹಲಿ: ಭಯೋತ್ಪಾದಕ ಸಂಘಟನೆಗಳಾದ ಅಲ್‌ಕೈದಾ, ಐಎಸ್‌ನ ಹೊಸ ಅಂಗಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರವು ಗುರುವಾರ ನಿರ್ಬಂಧ ಹೇರಿದೆ.

ಭಾರತದ ಉಪಖಂಡದ ಅಲ್ ಕೈದಾ ಮತ್ತು ಅಫ್ಗಾನಿಸ್ತಾನದಲ್ಲಿ ನೆಲೆಯಾಗಿರುವ ಐಎಸ್ ಅಂಗಸಂಸ್ಥೆ ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಅಂಡ್ ಶಾಮ್–ಖೊರಾಸನ್ (ಐಎಸ್ಐಎಸ್‌–ಕೆ) ಸಂಘಟನೆಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿವೆ ಎಂದು ಕೇಂದ್ರ ಗೃಹಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಐಎಸ್ಐಎಸ್‌–ಕೆ ಸಂಘಟನೆಯು ಖೊರಾಸನ್ ಪ್ರಾಂತ್ಯದ (ಐಎಸ್‌ಐಎಸ್ ವಿಲಾಯತ್ ಖೋರಾಸನ್) ಇಸ್ಲಾಮಿಕ್ ಸ್ಟೇಟ್ ಎಂದೇ ಪ್ರಸಿದ್ಧವಾಗಿದೆ. 

ಈ ಸಂಘಟನೆಗಳು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಹಾಗೂ ಜಾಗತಿಕ ಜಿಹಾದ್‌ಗೆ ಭಾರತೀಯ ಯುವಕರನ್ನು ಪ್ರಚೋದಿಸುತ್ತಿರುವ ಅಂಶ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ. 

ಅಲ್ ಕೈದಾದ ಸಹ ಸಂಸ್ಥೆ ಎಕ್ಯೂಐಎಸ್, ನೆರೆಯ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಉಪಖಂಡದಲ್ಲಿ ಭಾರತೀಯ ಹಿತಾಸಕ್ತಿಗಳ ಮೇಲೆ ಯುದ್ಧ ಸಾರಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !