ಹಣ ಚಿಂದಿ ಮಾಡಿದ ಇಲಿಗಳು!

7

ಹಣ ಚಿಂದಿ ಮಾಡಿದ ಇಲಿಗಳು!

Published:
Updated:

ಗುವಾಹಟಿ: ಎಟಿಎಂಗೆ ನುಗ್ಗಿದ ಇಲಿಗಳು ಬರೋಬ್ಬರಿ ₹12.38 ಲಕ್ಷ ಮೌಲ್ಯದ ನೋಟುಗಳನ್ನು ಚೂರು ಚೂರು ಮಾಡಿರುವುದು ತಿನ್ಸುಕಿಯಾ ನಗರದಲ್ಲಿ ನಡೆದಿದೆ.

ತಿನ್ಸುಕಿಯಾದ ಲೈಪುಲಿ ಪ್ರದೇಶದಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಎಟಿಎಂನಲ್ಲಿ ಈ ಪ್ರಕರಣ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಎಟಿಎಂನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಮೂರು ವಾರಗಳಿಂದ ಸ್ಥಗಿತಗೊಂಡಿತ್ತು. ಇದನ್ನು ದುರಸ್ತಿ ಮಾಡಲು ಕಳೆದ ಗುರುವಾರ ತಂತ್ರಜ್ಞರು ಬಂದಾಗ ಅಚ್ಚರಿ ಕಾದಿತ್ತು. ₹2,000 ಮತ್ತು ₹500ರ ಚೂರು ಚೂರಾದ ನೋಟುಗಳು ಪತ್ತೆಯಾದವು. ಆದರೆ, ಇದರಲ್ಲೇ ಇದ್ದ ಉಳಿದ ₹17.10 ಲಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ.

ಪೊಲೀಸರು ತನಿಖೆ ನಡೆಸಿದಾಗ ಇಲಿಗಳೇ ಈ ಕೃತ್ಯವೆಸಗಿದ್ದು, ಯಾವುದೇ ರೀತಿಯ ದುಷ್ಕೃತ್ಯ ಕಂಡು ಬಂದಿಲ್ಲ ಎನ್ನುವುದು ದೃಢಪಟ್ಟಿತು. ಈ ಪ್ರಕರಣದ ಬಗ್ಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಂತರಿಕ ತನಿಖೆಗೆ ಆದೇಶ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !