ಖ್ಯಾತ ಕಲಾವಿದ ನೆರೆಲ್ಲಾ ವೇಣುಮಾಧವ್‌ ನಿಧನ

5

ಖ್ಯಾತ ಕಲಾವಿದ ನೆರೆಲ್ಲಾ ವೇಣುಮಾಧವ್‌ ನಿಧನ

Published:
Updated:

ಹೈದರಾಬಾದ್‌: ಮಿಮಿಕ್ರಿ ಮತ್ತು ಮಾತನಾಡುವ ಗೊಂಬೆ ಖ್ಯಾತ ಕಲಾವಿದ ನೆರೆಲ್ಲಾ ವೇಣುಮಾಧವ್‌ (85) ವರಂಗಲ್‌ನ ಸ್ವಗೃಹದಲ್ಲಿ ಮಂಗಳವಾರ ಬೆಳಿಗ್ಗೆ 11.30ಕ್ಕೆ ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರಿಗಿತ್ತು.

2001ರಲ್ಲಿ ಅವರಿಗೆ ಪದ್ಮಶ್ರೀ ನೀಡಲಾಗಿತ್ತು. 1972 ರಿಂದ 1978 ರವರೆಗೆ ಆಂಧ್ರಪ್ರದೇಶ ವಿಧಾನ ಪರಿಷತ್ತಿನ ನಾಮನಿರ್ದೇಶನ ಸದಸ್ಯರಾಗಿಯೂ ಕಾರ್ಯನಿರ್ವಹಿಸಿ ದ್ದರು. ವರಂಗಲ್‌ನ ಮತ್ತೇವಾಡದಲ್ಲಿ 1932 ಡಿಸೆಂಬರ್‌ 28ರಂದು ಜನಿಸಿದ್ದ ವೇಣುಮಾಧವ್‌ ಅವರು, ಮಿಮಿಕ್ರಿಗೆ ಸಾರ್ವತ್ರಿಕ ಮನ್ನಣೆ, ಖ್ಯಾತಿ ತಂದು ಕೊಟ್ಟಿದ್ದರು. ಮಿಮಿಕ್ರಿ ಕಲೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ವೇಣುಮಾಧವ್‌ ಅವರ ಹೆಸರಿನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !