ಬೋಸರಾಜು, ಸಲೀಂ ನೇಮಕ

7

ಬೋಸರಾಜು, ಸಲೀಂ ನೇಮಕ

Published:
Updated:

ನವದೆಹಲಿ: ಕಾಂಗ್ರೆಸ್‌ ಮುಖಂಡರಾದ ಕರ್ನಾಟಕದ ಎನ್‌.ಎಸ್. ಬೋಸರಾಜು, ಸಲೀಂ ಅಹ್ಮದ್ ಹಾಗೂ ಕೇರಳದ ಶ್ರೀನಿವಾಸನ್ ಕೃಷ್ಣನ್‌ ಅವರನ್ನು ಎಐಸಿಸಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದು, ಅವರಿಗೆ ತೆಲಂಗಾಣದ ಉಸ್ತುವಾರಿ ವಹಿಸಲಾಗಿದೆ.

ಪಕ್ಷದ ಪುನರ್‌ರಚನೆಯ ಭಾಗವಾಗಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈ ನೇಮಕ ಮಾಡಿದ್ದಾರೆ. 

‘ತೆಲಂಗಾಣ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅವರ ಸೇವೆಯನ್ನು ಪಕ್ಷ ಪ್ರಶಂಸಿಸುತ್ತದೆ’ ಎಂದು ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !