ದಿಗ್ವಿಜಯ್‌ ಉಚ್ಚಾಟನೆಗೆ ಬಿಜೆಪಿ ಪಟ್ಟು

7
ಆರ್‌ಎಸ್‌ಎಸ್‌ ವಿರುದ್ಧ ಭಯೋತ್ಪಾದನೆ ಆರೋಪ

ದಿಗ್ವಿಜಯ್‌ ಉಚ್ಚಾಟನೆಗೆ ಬಿಜೆಪಿ ಪಟ್ಟು

Published:
Updated:
ದಿಗ್ವಿಜಯ್‌ ಸಿಂಗ್‌

ನವದೆಹಲಿ: ಆರ್‌ಎಸ್‌ಎಸ್‌ ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿ ಮುಗಿಬಿದ್ದಿದೆ.

ಹಿಂದೂಗಳಿಗೆ ಭಯೋತ್ಪಾದಕರ ಹಣೆಪಟ್ಟಿ ಕಟ್ಟಿದ ದಿಗ್ವಿಜಯ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸುವಂತೆ ಬಿಜೆಪಿ ಪಟ್ಟು ಹಿಡಿದಿದೆ.

‘ದಿಗ್ವಿಜಯ್‌ ಸಿಂಗ್‌ ಅವರು ಕೇವಲ ಆರ್‌ಎಸ್‌ಎಸ್ ವಿರುದ್ಧ ಆಪಾದನೆ ಮಾಡಿಲ್ಲ. ಕೋಟ್ಯಂತರ ಹಿಂದೂಗಳನ್ನು ಭಯೋತ್ಪಾದಕರು ಎಂದು ಕರೆದಿದ್ದಾರೆ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಆರೋಪಿಸಿದ್ದಾರೆ.

‘ಇಲ್ಲಿಯವರೆಗೆ ಭಯೋತ್ಪಾದನೆಯ ಆಪಾದನೆಯ ಮೇಲೆ ಬಂಧಿತರಾದ ಎಲ್ಲ ಹಿಂದೂ ಭಯೋತ್ಪಾದಕರೂ ಸಂಘದ (ಆರ್‌ಎಸ್‌ಎಸ್‌) ಸದಸ್ಯರು ಮತ್ತು ಕಾರ್ಯಕರ್ತರಾಗಿದ್ದವರು’ ಎಂದು ದಿಗ್ವಿಜಯ್ ಸಿಂಗ್‌ ಭಾನುವಾರ ಮಧ್ಯ ಪ್ರದೇಶದಲ್ಲಿ ಹೇಳಿದ್ದರು.

ಮಹಾತ್ಮ ಗಾಂಧಿ ಅವರ ಹಂತಕ ನಾತೂರಾಂ ಗೋಡ್ಸೆ ಕೂಡಆರ್‌ಎಸ್‌ಎಸ್‌ನವನಾಗಿದ್ದ. ದ್ವೇಷವನ್ನು ಬಿತ್ತುವುದೇ ಆರ್‌ಎಸ್‌ಎಸ್‌ ಸಿದ್ಧಾಂತ. ಈ ದ್ವೇಷವು ಹಿಂಸಾಚಾರಕ್ಕೆ, ಹಿಂಸಾಚಾರ ಭಯೋತ್ಪಾದನೆಗೆ ದಾರಿ ಮಾಡಿಕೊಡುತ್ತದೆ’ ಎಂದು ವಿಶ್ಲೇಷಿಸಿದ್ದರು.

‘ನಾನು ಎಂದಿಗೂ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆಯ ಬಗ್ಗೆ ಮಾತನಾಡಿಲ್ಲ. ಸಂಘ ಅಥವಾ ಸಂಘಿ (ಆರ್‌ಎಸ್‌ಎಸ್) ಭಯೋತ್ಪಾದನೆ ಬಗ್ಗೆ ಮಾತ್ರ ಮಾತನಾಡಿದ್ದೇನೆ’ ಎಂದು ದಿಗ್ವಿಜಯ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಮುಂಬರುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ ತನ್ನ ತುಷ್ಟೀಕರಣ ರಾಜಕಾರಣ ಆರಂಭಿಸಿದೆ ಎಂದು ಪಾತ್ರಾ ಆರೋಪಿಸಿದ್ದಾರೆ.

‘ಹಿಂದೂಗಳ ವಿರುದ್ಧ ಆರೋಪ ಮಾಡುವುದೇ ವಿರೋಧ ಪಕ್ಷಗಳ ತಂತ್ರವಾಗಿದೆ’ ಎಂದು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !