ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಸೂಪರ್‌ ಕಂಪ್ಯೂಟರ್‌ಗಳಿಗೆ ಸಂಸ್ಕೃತ ಬಳಕೆ : ಅನಂತಕುಮಾರ್‌ ಹೆಗಡೆ

Last Updated 21 ಜೂನ್ 2018, 12:37 IST
ಅಕ್ಷರ ಗಾತ್ರ

ಕೊಲ್ಕತ್ತಾ: ‘ಭವಿಷ್ಯದ ಸೂಪರ್‌ ಕಂಪ್ಯೂಟರ್‌ಗಳ ಕೋಡಿಂಗ್‌ ಭಾಷೆಯಾಗಿ ಸಂಸ್ಕೃತ ಬಳಕೆಯಾಗಲಿದೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯಸಚಿವ ಅನಂತಕುಮಾರ್‌ ಹೆಗಡೆ ತಿಳಿಸಿದ್ದಾರೆ.

ಕೊಲ್ಕತ್ತಾ ವಾಣಿಜ್ಯ ಒಕ್ಕೂಟಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕಂಪ್ಯೂಟರ್‌ನ ಸೂತ್ರಗಳನ್ನು(ಅಲ್ಗರಿದಮ್‌) ರೂಪಿಸಲು ಸಂಸ್ಕೃತ ಭಾಷೆ ಪೂರಕವಾಗಿದೆ’ ಎಂದರು.

‘ನಮ್ಮ ದೇಶದಲ್ಲಿ ಜನರು ಇಂಗ್ಲಿಷ್‌ ಮೇಲೆ ಹೆಚ್ಚು ಅವಲಂಬನೆ ಆಗುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಸಂಸ್ಕೃತವನ್ನು ಕಂಪ್ಯೂಟರ್‌ ಭಾಷೆಯಾಗಿಸುವ ಸಾಧ್ಯತೆಗಳ ಕುರಿತು ಸಂಶೋಧನೆ ಮಾಡಲು ಭಾರತಕ್ಕೆ ಬರುತ್ತಿದ್ದಾರೆಂದು ನಮಗೆ ಗೊತ್ತಿಲ್ಲ. ಯುರೋಪಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿಮುಂಬರುವ ದಿನಗಳಲ್ಲಿ ಸಂಸ್ಕೃತ ಕಲಿಕೆ ಪುನ: ಆರಂಭವಾಗಲಿದೆ’ ಎಂದರು.

‘ಐಎಎಸ್‌ ಮತ್ತು ಐಪಿಎಸ್‌ ಮಾದರಿಯಲ್ಲಿ ಕೇಂದ್ರ ಸರ್ಕಾರ ಇಂಡಿಯನ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಸರ್ವಿಸಸ್‌(ಐಎಸ್‌ಡಿಎಸ್‌) ಆರಂಭಿಸಿದೆ. ಈ ಹುದ್ದೆ ಏರುವವರಿಗೆ ತರಬೇತಿ ನೀಡಲು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಕಿಲ್‌(ಐಐಎಸ್‌) ಎಂಬ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಹೇಳಿದರು.

‘ಐಐಎಸ್‌ ಸಂಸ್ಥೆ ನಿರ್ಮಾಣಕ್ಕೆ ಕಾನ್ಪುರದಲ್ಲಿ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಇಂತಹ ಸಂಸ್ಥೆ ಪ್ರತಿ ರಾಜ್ಯದಲ್ಲಿ ನಿರ್ಮಾಣವಾಗಲು ಬೇಕಾದ ಅಗತ್ಯ ನೆರವನ್ನು ಕೇಂದ್ರ ನೀಡಲಿದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT