ಗುರುವಾರ , ಡಿಸೆಂಬರ್ 12, 2019
16 °C
ಭಯೋತ್ಪಾದನೆ ತಡೆಯಲು ಬಿಜೆಪಿ ವಿಫಲ: ಆರೋಪ

ದೇಶ ಮುನ್ನಡೆಸುವುದು ಆಟವಲ್ಲ’: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ:‘ದೇಶವನ್ನು ಮುನ್ನೆಡೆಸುವುದು ಮಕ್ಕಳ ಆಟವಲ್ಲ’ ಎಂದು ಶಿವಸೇನಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಬ್ರಿಟಿಷರು ಭಾರತದಿಂದ ತೊಲಗಿದಂತೆ ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದಿಂದ ಸೋತು ಕಾಲ್ಕಿತ್ತಿದೆ ಎಂದು ಅದು ಲೇವಡಿ ಮಾಡಿದೆ.

‘ಅಧಿಕಾರ ಲಾಲಸೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಿದ ಬಿಜೆಪಿಯನ್ನು ಇತಿಹಾಸ ಎಂದಿಗೂ ಕ್ಷಮಿಸಲಾರದು’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ತಡೆಯಲು ವಿಫಲವಾದ ಬಿಜೆಪಿ, ಮಿತ್ರಪಕ್ಷ ಪೀಪಲ್ಸ್‌ ಡೆಮಾಕ್ರೆಟಿಕ್‌ ಪಾರ್ಟಿಯ (ಪಿಡಿಪಿ) ಮೇಲೆ ಗೂಬೆ ಕೂರಿಸಲು ಸರ್ಕಾರದಿಂದ ಹೊರಬಿದ್ದಿದೆ ಎಂದು ವಿಶ್ಲೇಷಿಸಿದೆ.

‘ಜಮ್ಮು ಕಾಶ್ಮೀರದ ಸಮ್ಮಿಶ್ರ ಸರ್ಕಾರ ಬಿಜೆಪಿಯ ಅಧಿಕಾರ ಲಾಲಸೆಯ ಫಲವಾಗಿತ್ತು. ಅದರ ದುರಾಸೆಗೆ ನಮ್ಮ ಯೋಧರು, ಜಮ್ಮು ಮತ್ತು ಕಾಶ್ಮೀರದ ಜನತೆ ಭಾರಿ ಬೆಲೆ ತೆರಬೇಕಾಯಿತು’ ಎಂದು ಹೇಳಿದೆ.

ಕಣಿವೆಯಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸುವ ಆಶ್ವಾಸನೆಯೊಂದಿಗೆ ಮೋದಿ ಅವರು ದೆಹಲಿ ಗದ್ದುಗೆ ಏರಿದ್ದರು. ಆದರೆ,ಆಶ್ವಾಸನೆ ನಿಭಾಯಿಸುವಲ್ಲಿ ಮೋದಿ ಹಾಗೂ ಬಿಜೆಪಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ‘ಸಾಮ್ನಾ’ ಟೀಕಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು