ರಾಜ್ಯದ ವಿದ್ಯಾರ್ಥಿಗಳಿಗೆ ಶೇ 50 ಸೀಟು

7
ಡೀಮ್ಡ್‌ ವಿ.ವಿಗಳ ಎಂಬಿಬಿಎಸ್‌, ವೈದ್ಯಕೀಯ ಸೀಟು

ರಾಜ್ಯದ ವಿದ್ಯಾರ್ಥಿಗಳಿಗೆ ಶೇ 50 ಸೀಟು

Published:
Updated:

ಬೆಂಗಳೂರು: ‘ರಾಜ್ಯದ ಎಂಟು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿರುವ ಎಂಬಿಬಿಎಸ್‌ ಮತ್ತು ದಂತ ವೈದ್ಯಕೀಯ ಸೀಟುಗಳಲ್ಲಿ ಶೇ 50ರಷ್ಟನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಡೀಮ್ಡ್‌ ವಿ.ವಿಗಳ ಮುಖ್ಯಸ್ಥರ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ರಾಜ್ಯದ ಎಂಟು ಡೀಮ್ಡ್ ವಿ.ವಿಗಳಲ್ಲಿ 1,630 ಎಂಬಿಬಿಎಸ್‌, 640 ದಂತ ವೈದ್ಯಕೀಯ ಸೀಟುಗಳಿವೆ ಎಂದರು.

‘ಕೇಂದ್ರ ಸರ್ಕಾರವೇ ಪರೀಕ್ಷೆ ನಡೆಸಿ ಪ್ರವೇಶ ನೀಡಲಿ. ಆದರೆ, ಒಟ್ಟು ಸೀಟುಗಳಲ್ಲಿ ಅರ್ಧದಷ್ಟನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂದು ಕೇಂದ್ರಕ್ಕೆ ಶೀಘ್ರದಲ್ಲೇ ಅಹವಾಲು ಸಲ್ಲಿಸಲಾಗುವುದು. ಪತ್ರ ಬರೆಯುವ ವಿಷಯದಲ್ಲಿ ಒಂದೆರಡು ವಿ.ವಿಗಳ ಮುಖ್ಯಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದ ಅವರು, ಆ ವಿ.ವಿ.ಗಳ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು.

‘ಡೀಮ್ಡ್‌ ವಿವಿಗಳ ಸೀಟುಗಳನ್ನು ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾ ಲಯ ತುಂಬುತ್ತದೆ. ಸೀಟು ಭರ್ತಿ ಮತ್ತು ಶುಲ್ಕ ನಿಗದಿಪಡಿಸುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಈ ಕಾರಣಕ್ಕೆ ಎಲ್ಲ ಸೀಟುಗಳು ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತದೆ. ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದು ಮುಂದಿನ ದಿನಗಳಲ್ಲಿ ವೈದ್ಯರ ಕೊರತೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಬಹುದು’ ಎಂದೂ ಆತಂಕ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !