ಬೇಳೂರು ಬಂಧಿಸಲು ಆಯನೂರು ಮಂಜುನಾಥ್ ಒತ್ತಾಯ

7
ಶೋಭಾ ಕರಂದ್ಲಾಜೆ ವಿರೋಧ

ಬೇಳೂರು ಬಂಧಿಸಲು ಆಯನೂರು ಮಂಜುನಾಥ್ ಒತ್ತಾಯ

Published:
Updated:

ಶಿವಮೊಗ್ಗ: ‘ಶೋಭಾ ಕರಂದ್ಲಾಜೆ ಅವರ ಮನೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಖಜಾನೆ ಇರುವುದು ಗೊತ್ತಿದ್ದರೂ ಮಾಹಿತಿ ನೀಡದ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲ
ಕೃಷ್ಣ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಧಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಒತ್ತಾಯಿಸಿದರು.

ಮೊದಲು ನೋಟಿಸ್ ನೀಡಿ, ನಂತರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಹಣ ಇರುವ ಕುರಿತು ಸಾಕ್ಷ್ಯ ಒದಗಿಸಬೇಕು. ಇಲ್ಲದಿದ್ದರೆ ಬಿಜೆಪಿ ಅವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಿದೆ ಎಂದು 
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ಯಾರ ಮನೆಯಲ್ಲಿ ಹಣ ಇದೆ ಎಂದು ಹುಡುಕುವುದೇ ಬೇಳೂರು ಕೆಲಸ. ಹೀಗೆ ಪತ್ತೆ ಹಚ್ಚಿದ ಹಣದ ಮಾಹಿತಿ ನೀಡದೇ ಇರುವುದೂ ಗುರುತರ ಅಪರಾಧ. ಅವರನ್ನು ವಶಕ್ಕೆ ಪಡೆದು ಶೋಧ ಕಾರ್ಯ ನಡೆಸಬೇಕು. ಅಧಿಕಾರಿಗಳು ಅವರ ಮಾತನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದರು.

ಟಿಕೆಟ್ ಕೈತಪ್ಪಿದ್ದರಿಂದ ಆರೋಪ: ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ‘ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಜಕೀಯ ಪ್ರೇರಿತವಾಗಿ ನನ್ನ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದಾರೆ. ಅಂತಹ ಕ್ಷುಲ್ಲಕ ಮಾತಿಗೆ 
ಉತ್ತರಿಸಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅವರದೇ ಸರ್ಕಾರ ಇದೆ. ಯಾರ ಮನೆ ಮೇಲಾದರೂ ದಾಳಿ ನಡೆಸುವ ಅವಕಾಶ ಸರ್ಕಾರಕ್ಕೆ ಇದೆ ಎಂದರು.

‘ಜೆಡಿಎಸ್–ಕಾಂಗ್ರೆಸ್‌ನವರು ಮಾಡುತ್ತಿರುವ ಪಾಪಕ್ಕೆ ಅವರೇ ಕುಸಿದು ಹೋಗುತ್ತಾರೆ. ಯಾವಾಗ ಕುಸಿಯುತ್ತಾರೆ ಎಂದು ಜನರು ಕಾಯುತ್ತಿದ್ದಾರೆ. ನಾವೂ ಕಾಯುತ್ತಿದ್ದೇವೆ’ ಎಂದು ಹೇಳಿದರು.

‘ಆದಾಯ ತೆರಿಗೆ ಇಲಾಖೆ ರಾಜ್ಯದಲ್ಲಿ ಮಾತ್ರವಲ್ಲ, ದೇಶದಾದ್ಯಂತ 70 ವರ್ಷದಿಂದಲೂ ಈ ದಾಳಿ ನಡೆಸಿ ತನಿಖೆ ನಡೆಸಿದೆ. ಕಾಂಗ್ರೆಸ್‌ನವರು ಅದನ್ನು ರಾಜಕೀಯಗೊಳಿಸುತ್ತಿದ್ದಾರೆ. ದೇಶದಲ್ಲಿ 50 ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದೆ. ಹಾಗಾದರೆ ಅಂದು ನಡೆದ ದಾಳಿ ರಾಜಕೀಯ ಪ್ರೇರಿತವಾಗಿತ್ತೆ?’ ಎಂದು ಶೋಭಾ ಪ್ರಶ್ನಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !