4
ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾದ ಅರಳೆ

ಹಾಸಿಗೆ ತಯಾರಿಕೆ ಘಟಕಕ್ಕೆ ಬೆಂಕಿ

Published:
Updated:
ಬಾದಾಮಿ ತಾಲ್ಲೂಕು ಕೆರೂರಿನಲ್ಲಿ ಮಂಗಳವಾರ ರಾತ್ರಿ ಗಾದಿ ತಯಾರಿಕೆ ಘಟಕ ಬೆಂಕಿ ಅವಘಡಕ್ಕೆ ತುತ್ತಾಗಿ ಹೊತ್ತಿ ಉರಿಯಿತು

ಕೆರೂರು (ಬಾಗಲಕೋಟೆ): ಅರಳೆ ಸಂಸ್ಕರಿಸಿ ಗಾದಿ (ಹಾಸಿಗೆ) ತಯಾರಿಸುವ ಘಟಕಕ್ಕೆ ಮಂಗಳವಾರ ತಡರಾತ್ರಿ ಬೆಂಕಿ ಬಿದ್ದಿದೆ. ಇದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ.

ಹುಬ್ಬಳ್ಳಿ–ಸೊಲ್ಲಾಪುರ ರಸ್ತೆಯ ಹುಲ್ಮನಿ ಕೈಗಾರಿಕಾ ಪ್ರದೇಶದಲ್ಲಿನ ಎರಡು ಉಗ್ರಾಣಗಳನ್ನು ಬಾಡಿಗೆ ಪಡೆದ ಮಹಾರಾಷ್ಟ್ರದ ಕೆಲವರು, ಅಲ್ಲಿ ಗಾದಿ ತಯಾರಿಸಿ ಸುತ್ತಲಿನ ಪ್ರದೇಶ ಗಳಲ್ಲಿ ಮಾರಾಟ ಮಾಡುತ್ತಿದ್ದರು.

ಬೆಂಕಿ ಅವಘಡ ಸಂಭವಿಸಿ ಇಡೀ ಘಟಕ ಹೊತ್ತಿ ಉರಿಯಿತು. ಬೆಂಕಿಯ ಕೆನ್ನಾಲಿಗೆ ಚಾಚಿ ಸುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಅವರೊಂದಿಗೆ ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರು ಕೈ ಜೋಡಿಸಿದರು. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !