ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನಭಾಗ್ಯ ಯಾವಾಗ?

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ರಾಜ್ಯದ ಶಿಕ್ಷಣ ಇಲಾಖೆಯು ಜುಲೈ ತಿಂಗಳಲ್ಲಿ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿತ್ತು. ಇಂಥ ಶಿಕ್ಷಕರಿಗೆ ಆರು ತಿಂಗಳಿನಿಂದ ವೇತನ ನೀಡಿಲ್ಲ. ಅತಿಥಿ ಶಿಕ್ಷಕರಲ್ಲಿ ಹೆಚ್ಚಿನವರು ಸಿಇಟಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಒಂದೆಡೆ ಉದ್ಯೋಗದ ನಿರೀಕ್ಷೆ, ಇನ್ನೊಂದೆಡೆ ವೇತನವೇ ಇಲ್ಲದೆ ದುಡಿಮೆ. ಹೀಗಾದರೆ ಇಂಥ ಶಿಕ್ಷಕರ ಗತಿ ಏನು? ಗೌರವಧನವನ್ನು ಹೆಚ್ಚಿಸುತ್ತೇವೆ ಎಂದು ಭರವಸೆಯನ್ನು ನೀಡಿದ್ದ ಸರ್ಕಾರವು ಪ್ರತಿ ತಿಂಗಳು ಕೊಡಬೇಕಾದ ವೇತನವನ್ನು ಸಹ ಕೊಡದೆ ಶಿಕ್ಷಕರಿಗೆ ಅನ್ಯಾಯ ಎಸಗುತ್ತಿದೆ. ಸರ್ಕಾರವು ಅತಿಥಿ ಶಿಕ್ಷಕರಿಗೆ ವೇತನಭಾಗ್ಯ ಕರುಣಿಸುವುದು ಯಾವಾಗ?

ನರಸಿಂಹಮೂರ್ತಿ ಎ.ಎನ್., ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT