4

ಶಿರಾಡಿ ಘಾಟ್‌: ಕಾಂಕ್ರೀಟ್ ಕಾಮಗಾರಿಗೆ ಮಳೆ ಅಡ್ಡಿ

Published:
Updated:
ಸಕಲೇಶಪುರದ ಶಿರಾಡಿ ಘಾಟ್‌ನಲ್ಲಿ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟ್‌ ಕಾಮಗಾರಿ ನಡೆದಿರುವುದು

ಸಕಲೇಶಪುರ: ಪಶ್ಚಿಮಘಟ್ಟ ಹಾಗೂ ಕರಾವಳಿ ಭಾಗದಲ್ಲಿ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಶಿರಾಡಿ ಘಾಟ್‍ನಲ್ಲಿ ಬೆಂಗಳೂರು– ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟ್‍ ಕಾಮಗಾರಿಗೆ ಅಡ್ಡಿಯಾಗಿದೆ.

ಕಾಮಗಾರಿಗಾಗಿ ಜ. 20ರಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್‍ ಮಾಡಲಾಗಿದೆ. ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಚಾರ ಬಂದ್‍ ಆಗಿ ಐದು ತಿಂಗಳು ಕಳೆದಿದೆ. ಅತ್ತ ಶಿರಾಡಿ ಘಾಟ್‍ ಮತ್ತು ಮಂಗಳೂರು– ಬೆಂಗಳೂರು ರೈಲು ಮಾರ್ಗವೂ ಸಹ ಆಗಾಗ ಬಂದ್‍ ಆಗುತ್ತಿರುವುದರಿಂದ ಈ ಮಾರ್ಗದ ಪ್ರಯಾಣ ಕಷ್ಟಕರವಾಗಿದೆ.

‘ಸಮಸ್ಯೆಯ ಗಂಭೀರತೆ ಅರಿತ ಗುತ್ತಿಗೆದಾರರು ಕಾಮಗಾರಿ ಚುರುಕುಗೊಳಿಸಿದ್ದಾರೆ. ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳು ಸಹ ಒತ್ತಡ ಹಾಕುತ್ತಲೇ ಇದ್ದಾರೆ. ಮಳೆ ಕಾಮಗಾರಿಗೆ ಅಡ್ಡಿಯಾಗಿದೆ. ಇಲ್ಲದಿದ್ದರೆ ಅಂದುಕೊಂಡಂತೆ ಮೇ 15ರಂದು ಈ ಮಾರ್ಗದಲ್ಲಿ ವಾಹನಗಳ ಸಂಚಾರ ಆರಂಭವಾಗುತ್ತಿತ್ತು’ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೂಪರಿಂಟೆಂಡಿಂಗ್ ಎಂಜಿನಿಯರ್ ರಾಘವನ್‍ ಹೇಳುತ್ತಾರೆ.

‘12.38 ಕಿ.ಮೀ ರಸ್ತೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ನಾಲ್ಕು ಹೊಸ ಸೇತುವೆ ನಿರ್ಮಿಸಿದ ಸ್ಥಳದಲ್ಲಿ ಮಾತ್ರ ಕೆಲಸ ಬಾಕಿಯಿದೆ. ನಾಲ್ಕು ದಿನ ಮಳೆ ಬಿಡುವು ಕೊಟ್ಟರೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಕ್ಯೂರಿಂಗ್‍ ಆಗುವುದಕ್ಕೆ 15 ದಿನ ಬೇಕು. ತಡೆಗೋಡೆ, ಎರಡೂ ಬದಿಗೆ ಗ್ರಾವೆಲ್‍ ಹಾಕುವ ಕೆಲಸವೂ ಸಹ ಮುಗಿಯುತ್ತಾ ಬಂದಿದೆ’ ಎಂದು ಓಷನ್‍ ಕನ್‌ಸ್ಟ್ರಕ್ಷನ್ ಕಂಪನಿ ನಿರ್ದೇಶಕ ಶರ್ಫುದ್ದೀನ್‍ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !