‘ನಿರುದ್ಯೋಗದಿಂದ ಅತೃಪ್ತಿ‘

7

‘ನಿರುದ್ಯೋಗದಿಂದ ಅತೃಪ್ತಿ‘

Published:
Updated:

ಧಾರವಾಡ: ‘ಸರಿಯಾಗಿ ಆಡಳಿತ ನಡೆಸದ ಜನಪ್ರತಿನಿಧಿಗಳು ನಿರುದ್ಯೋಗ ಸೃಷ್ಟಿಸಿದ್ದಾರೆ. ಇದರಿಂದಾಗಿ ಯುವಕರು ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ನಾನು ಹೇಳಿಲ್ಲ. ನಿರುದ್ಯೋಗ ಸೃಷ್ಟಿಯಿಂದ ಯುವ ಜನರಲ್ಲಿ ಅತೃಪ್ತಿ ಮೂಡಿದೆ. ಇಂಥ ಅಸಹಾಯಕತೆಯು ಅವರಲ್ಲಿನ ಕೆಲವರನ್ನು ಉಗ್ರವಾದ ಮತ್ತು ಭಯೋತ್ಪಾದನೆಯ ಕಡೆಗೆ ಸೆಳೆಯುತ್ತಿದೆ’ ಎಂದು ಹೇಳಿದ್ದಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಸ್ಪಷ್ಟಪಡಿಸಿದ್ದಾರೆ.

‘ವಿಶ್ವಶಾಂತಿ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿನ ನನ್ನ ಭಾಷಣವನ್ನು ಜೂನ್‌ 21ರ ‍‘ಪ್ರಜಾವಾಣಿ’ ಸಂಚಿಕೆಯಲ್ಲಿ (‘ಆಳುವವರಿಂದಲೇ ಸಂವಿಧಾನಕ್ಕೆ ಅಪಚಾರ’) ತಪ್ಪಾಗಿ ಗ್ರಹಿಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ ಹತ್ತೊಂಬತ್ತುವರೆ ವರ್ಷಗಳಲ್ಲಿ ನೀಡಿದ ತೀರ್ಪುಗಳಿಂದ ಜನರು ಯಾವ ರೀತಿ ಸದುಪಯೋಗ ಪಡೆದಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದನ್ನು ನಾನು ನೀಡಿದ ತೀರ್ಪುಗಳು ಎಷ್ಟು ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ’ ಎಂದು ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !