ಅಂಚೆ ವಿಮೆ: ಗ್ರಾಮೀಣ ಜನರಿಗೆ ಸುರಕ್ಷೆ

7
ಕೇಶವಾರ ಸಂಪೂರ್ಣ ಅಂಚೆ ಜೀವ ವಿಮಾ ಗ್ರಾಮ ಘೋಷಣೆ

ಅಂಚೆ ವಿಮೆ: ಗ್ರಾಮೀಣ ಜನರಿಗೆ ಸುರಕ್ಷೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಗ್ರಾಮೀಣ ಜನರ ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯರೂಪಕ್ಕೆ ತರಲಾಗಿರುವ ಸಂಪೂರ್ಣ ಅಂಚೆ ಜೀವ ವಿಮಾ ಯೋಜನೆ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ತಪ್ಪದೆ ಪಡೆದುಕೊಳ್ಳುವುದು ಅವಶ್ಯಕ’ ಎಂದು ಕೋಲಾರ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಲ್.ಮಂಜುನಾಥ್‌ ಹೇಳಿದರು.

ತಾಲ್ಲೂಕಿನ ಕೇಶವಾರ ಗ್ರಾಮದಲ್ಲಿ ಕೋಲಾರ ಅಂಚೆ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂಪೂರ್ಣ ಅಂಚೆ ಜೀವ ವಿಮಾ ಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಚೆ ಜೀವ ವಿಮೆ ಒಂದು ಸುರಕ್ಷಾ ಕವಚವಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ವಯೋಮಿತಿಯ ನಾಗರಿಕನನ್ನು ಈ ಯೋಜನೆ ಅಡಿ ತರುವುದು ಇಲಾಖೆಯ ಆಶಯ. ಶೇ 75 ರಷ್ಟು ಕೃಷಿ ಮೇಲೆ ಅವಲಂಬಿತರಾಗಿರುವ ಗ್ರಾಮೀಣ ಜನರ ಬದುಕನ್ನು ಹಸನಗೊಳಿಸಲು ಈ ಯೋಜನೆ ಸಹಕಾರಿಯಾಗಿದೆ. ಪ್ರತಿಯೊಬ್ಬರು ದುಡಿಮೆಯ ಸ್ವಲ್ಪ ಹಣವನ್ನು ಉಳಿತಾಯ ಮಾಡುವುದರಿಂದ ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಸಿದಾರರಿಗೆ ಬಾಂಡ್ ಹಾಗೂ ಪಾಸ್‌ಪುಸ್ತಕಗಳನ್ನು ವಿತರಿಸಲಾಯಿತು. ಚಿಕ್ಕಬಳ್ಳಾಪುರ ಅಂಚೆ ವೃತ್ತ ನಿರೀಕ್ಷಕ ಸತ್ಯಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ಕೆ.ಎಲ್.ಮುರುಳಿ, ನಿವೃತ್ತ ಶಿಕ್ಷಕ ತಿರುಮಳಪ್ಪ, ಕೆ.ವಿ.ನಾರಾಯಣರಾವ್‌, ಶಾಲಾ ಮುಖ್ಯ ಶಿಕ್ಷಕಿ ಉಮಾವತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !