#ಆರ್‌ಆರ್‌ಆರ್‌ ಚಿತ್ರಕ್ಕೆ ಪ್ರಭಾಸ್‌

ಭಾನುವಾರ, ಏಪ್ರಿಲ್ 21, 2019
26 °C

#ಆರ್‌ಆರ್‌ಆರ್‌ ಚಿತ್ರಕ್ಕೆ ಪ್ರಭಾಸ್‌

Published:
Updated:
Prajavani

ತೆಲುಗು ಚಿತ್ರರಂಗದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಚಿತ್ರ ರಾಜಮೌಳಿ ನಿರ್ದೇಶನದ #ಆರ್‌ಆರ್‌ಆರ್‌. ಭರ್ಜರಿ ತಾರಾಗಣ ಒಂದೆಡೆಯಾದರೆ ಚಿತ್ರಕತೆ ಬಯಸುವಂತಹ ಅದ್ದೂರಿ ಸೆಟ್‌ ಮತ್ತು ತಾಂತ್ರಿಕ ಕೌಶಲದಿಂದಾಗಿ ಈ ಚಿತ್ರ ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. 

ತೆಲುಗು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸುವ ಮತ್ತೊಂದು ಚಿತ್ರ ಇದಾಗಬೇಕು ಎಂಬ ರಾಜಮೌಳಿ ಲೆಕ್ಕಾಚಾರ. ಇದೀಗ ಅವರು ಕೊಟ್ಟಿರುವ ಹೊಸ ಸುದ್ದಿ ನೋಡಿ.

#ಆರ್‌ಆರ್‌ಆರ್‌ ನಲ್ಲಿ ‘ಬಾಹುಬಲಿ’ ಪ್ರಭಾಸ್‌ಗೆ ಮಹತ್ವದ ಜವಾಬ್ದಾರಿಯೊಂದನ್ನು ಅವರು ಸೃಷ್ಟಿಸಿದ್ದಾರೆ. ಹೌದು, ಪ್ರಭಾಸ್‌ #ಆರ್‌ಆರ್‌ಆರ್‌ನ ಎರಡು ಪ್ರಮುಖ ಪಾತ್ರಗಳಿಗೆ ಕಂಠದಾನ ಮಾಡಲಿದ್ದಾರೆ. ಅಲ್ಲುರಿ ಸೀತಾರಾಮ ಮತ್ತು ಕೋಮರಮ್‌ ಭೀಮ್‌ ಪಾತ್ರಗಳ ಸಂಭಾಷಣೆಗೆ ಪ್ರಭಾಸ್‌ ಕಂಠ ನೀಡಲಿದ್ದಾರೆ.

ತಾರಕ್‌ ಮತ್ತು ರಾಮ್‌ಚರಣ್‌ ಮಾಡಲಿರುವ ಈ ಪಾತ್ರಕ್ಕೆ ಪ್ರಭಾಸ್‌ ಎಂಟ್ರಿಯಿಂದಾಗಿ ತಾರಾ ಮೌಲ್ಯ ಹೆಚ್ಚಿದಂತಾಗಿದೆ. ಚಿತ್ರೀಕರಣದ ವೇಳೆ  ಪಾದದ ಮೂಳೆಗೆ ಏಟು ಬಿದ್ದಿರುವ ಕಾರಣ ರಾಮ್‌ ಚರಣ್‌ ವಿಶ್ರಾಂತಿಯಲ್ಲಿದ್ದಾರೆ. ಅವರು ಹಿಂತಿರುಗುತ್ತಲೇ ಪ್ರಭಾಸ್‌ #ಆರ್‌ಆರ್‌ಆರ್‌ ಸೆಟ್‌ ಸೇರಿಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !