ಮಂಗಳವಾರ, ನವೆಂಬರ್ 12, 2019
28 °C

ರೊಮ್ಯಾಂಟಿಕ್‌ ಚಿತ್ರಕ್ಕೆ ಪ್ರಭಾಸ್‌ ತಯಾರಿ

Published:
Updated:

‘ಸಾಹೋ’ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಟ ಪ್ರಭಾಸ್‌ ತಮ್ಮ ಮುಂದಿನ ರೊಮ್ಯಾಂಟಿಕ್‌ ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ.

ಪ್ರಭಾಸ್‌ ಕಠಿಣ ಡಯೆಟ್‌ ಮಾಡುತ್ತಿದ್ದು, ಮುಂದಿನ ಚಿತ್ರಕ್ಕಾಗಿ ಅವರು ತೂಕ ಕಳೆದುಕೊಳ್ಳಲು ಭಾರಿ ವರ್ಕೌಟ್‌ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಾಧಾ ಕೃಷ್ಣ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಯುರೋಪ್‌ನಲ್ಲಿ ನಡೆಯಲಿದೆ. ಪ್ರಭಾಸ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

ಆ್ಯಕ್ಷನ್‌ ಥ್ರಿಲ್ಲರ್‌ ಕತೆಯನ್ನೊಳಗೊಂಡ ‘ಸಾಹೋ’ ಚಿತ್ರಕ್ಕೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ. ಈಗ ರೊಮ್ಯಾಂಟಿಕ್‌ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ರಂಜಿಸಲು ಅವರು ಮುಂದಾಗಿದ್ದಾರೆ. ಇದು ಅವರ 20ನೇ ಚಿತ್ರ.  ಈ ಚಿತ್ರಕ್ಕಾಗಿ ಅವರು ಕೆಲ ಕೆ.ಜಿಗಳಷ್ಟು ತೂಕವನ್ನು ಕಳೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಆ ನಟ ಈಗ ಕಠಿಣ ಡಯೆಟ್‌, ವ್ಯಾಯಾಮ ತರಬೇತಿ ಹಾಗೂ ಕಠಿಣ ವರ್ಕೌಟ್‌ಗಳನ್ನು ಮಾಡುತ್ತಿದ್ದಾರೆ.

ಈ ಚಿತ್ರದ ಬಗ್ಗೆ ಕೆಲ ದಿನಗಳ ಹಿಂದೆ ಪ್ರಭಾಸ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ‘ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ನನ್ನ ಮುಂದಿನ ಚಿತ್ರದ ಬಗ್ಗೆ ಘೋಷಣೆ ಮಾಡಲು ತುಂಬಾ ಖುಷಿಯಾಗುತ್ತಿದೆ. ಯುವಿ ಕ್ರಿಯೇಶನ್‌ ಅಸೋಸಿಯೇಷನ್‌ ಸಹಯೋಗದೊಂದಿಗೆ ಗೋಪಿ ಕೃಷ್ಣ ಮೂವೀಸ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ’ ಎಂದು ಬರೆದುಕೊಂಡಿದ್ದರು.

 

ಪ್ರತಿಕ್ರಿಯಿಸಿ (+)