ಬಿಜೆಪಿ ಸಮಾವೇಶದಿಂದ ತೆರಳುತ್ತಿದ್ದವರ ಬಸ್ ಬೈಕಿಗೆ ಡಿಕ್ಕಿ; ಬಸ್‌ಗೆ ಕಲ್ಲು ತೂರಾಟ

ಬುಧವಾರ, ಏಪ್ರಿಲ್ 24, 2019
32 °C
ಬಿಜೆಪಿ ಕಾರ್ಯಕರ್ತರಿಂದ‌ ಪ್ರತಿಭಟನೆ

ಬಿಜೆಪಿ ಸಮಾವೇಶದಿಂದ ತೆರಳುತ್ತಿದ್ದವರ ಬಸ್ ಬೈಕಿಗೆ ಡಿಕ್ಕಿ; ಬಸ್‌ಗೆ ಕಲ್ಲು ತೂರಾಟ

Published:
Updated:

ಮಂಗಳೂರು: ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ವಾಪಸ್ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ಬಸ್ ಉಳ್ಳಾಲದ ಮದನಿನಗರದಲ್ಲಿ ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಸ್ಥಳೀಯರು ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಅಪಘಾತದಲ್ಲಿ ಬೈಕ್ ಸವಾರನಿಗೆ ಗಾಯವಾಗಿದೆ. ಬಳಿಕ ಸ್ಥಳದಲ್ಲಿದ್ದ ಕೆಲವರು ಬಸ್ ಮೇಲೆ ಕಲ್ಲು ತೂರಿದ್ದಾರೆ. ಬಸ್ಸಿನಲ್ಲಿದ್ದ ಬಿಜೆಪಿಯ ಕೆಲವು ಕಾರ್ಯಕರ್ತರಿಗೆ ಗಾಯಗಳಾಗಿವೆ.

ಬಳಿಕ ಸ್ಥಳದಲ್ಲಿ ಜಮಾಯಿಸಿರುವ ಬಿಜೆಪಿ ಕಾರ್ಯಕರ್ತರು, ಕಲ್ಲು ತೂರಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ರವಾನಿಸಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !