ಶಿವಾಲಯ ಮೇಲೆ ಐಟಿ ದಾಳಿ: ಮೋದಿಗೆ ಶಿವನ ಶಾಪ ತಟ್ಟಲಿದೆ- ಕುಮಾರಸ್ವಾಮಿ

ಶನಿವಾರ, ಏಪ್ರಿಲ್ 20, 2019
32 °C

ಶಿವಾಲಯ ಮೇಲೆ ಐಟಿ ದಾಳಿ: ಮೋದಿಗೆ ಶಿವನ ಶಾಪ ತಟ್ಟಲಿದೆ- ಕುಮಾರಸ್ವಾಮಿ

Published:
Updated:

ಕುಣಿಗಲ್: ಹರದನಹಳ್ಳಿಯಲ್ಲಿ ಎಚ್.ಡಿ.ದೇವೇಗೌಡರು ಪೂಜಿಸಿಕೊಂಡು ಬಂದ ಶಿವಾಲಯದ ಗರ್ಭಗುಡಿ, ಅರ್ಚಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದ್ದು, ಐ.ಟಿ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಆ ಶಿವನ ಶಾಪ ತಟ್ಟಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

* ಇದನ್ನೂ ಓದಿ: ಹರದನಹಳ್ಳಿ ಈಶ್ವರ ದೇಗುಲದ ಅರ್ಚಕರ ಮನೆ ಮೇಲೆ ಐಟಿ ದಾಳಿ

ಶಿವನ ದೇವಾಲಯದಲ್ಲಿ ದೇವೇಗೌಡರು ಹಣ ಇಟ್ಟಿದ್ದಾರೆ ಎಂದು ಹುಂಡಿ ಪರಿಶೀಲನೆ ಮಾಡಿದ್ದಾರೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.

ದೇವೇಗೌಡರ ಕುಟುಂಬ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿಲ್ಲ.  ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಹತ್ತೂ ತಾಲ್ಲೂಕಿಗೆ ನೀರು ಹರಿಸಲಾಗುವುದು ಎಂದರು.

11 ತಿಂಗಳಲ್ಲಿ ಮೈತ್ರಿ ಸರ್ಕಾರವು ₹ 5 ಸಾವಿರ ಕೋಟಿ ಹಣವನ್ನು ವಿವಿಧ ಅಭಿವೃದ್ಧಿ ಯೊಜನೆಗಳಿಗೆ ದೊರಕಿಸಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !