ಶಿರಸಿ: ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷನ ಮನೆಯ ಮೇಲೆ ಐಟಿ ದಾಳಿ 

ಭಾನುವಾರ, ಏಪ್ರಿಲ್ 21, 2019
26 °C

ಶಿರಸಿ: ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷನ ಮನೆಯ ಮೇಲೆ ಐಟಿ ದಾಳಿ 

Published:
Updated:

ಶಿರಸಿ: ಇಲ್ಲಿನ ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಆರ್.ವಿ.ಹೆಗಡೆ ಚಿಪಗಿ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ವಿಚಕ್ಷಣಾ ದಳದ ಅಧಿಕಾರಿಗಳ ಜತೆ ಸೇರಿ ದಾಳಿ‌ ನಡೆಸಿದ್ದಾರೆ.

ತಾಲ್ಲೂಕಿನ ಚಿಪಗಿಯಲ್ಲಿರುವ ಅವರ ಮನೆಯ ಮೇಲೆ ಹುಬ್ಬಳ್ಳಿ ಹಾಗೂ ಗೋವಾದ ಐಟಿ ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವೇಳೆ ಮೂರು ಕಾರು ಹಾಗೂ ದಾಖಲೆಗಳಿಲ್ಲದ ನಗದು ಮನೆಯಲ್ಲಿ ಪತ್ತೆಯಾಗಿದೆ‌ ಎನ್ನಲಾಗಿದೆ.

ಕೃಷ್ಣ ಎಸಳೆ ನಿವಾಸದ ಮೇಲೂ ದಾಳಿ

ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಆಪ್ತ ಕೃಷ್ಣ ಎಸಳೆ ಅವರ ವಿವೇಕಾನಂದ ನಗರದಲ್ಲಿರುವ ಮನೆಯ ಮೇಲೆ ಸಹ ದಾಳಿ ನಡೆದಿದೆ. ಕೃಷ್ಣ ಎಸಳೆ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ.

ದಾಖಲೆ ಪರಿಶೀಲನೆ

ಐಟಿ ದಾಳಿ ಮುಂದುವರಿದಿದ್ದು, ಬಿಜೆಪಿ‌ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಆಪ್ತರಾಗಿರುವ ಮುನಾಫ್ ಅವರ ಗೌಡಳ್ಳಿಯಲ್ಲಿರುವ‌ ಮನೆಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

ಸಿದ್ದಾಪುರದ ಹಣಜಿಬೈಲಿನಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಅವರ ಮನೆಯ ಮೇಲೆಯೂ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !