ಬಿ.ಎನ್.ಬಚ್ಚೇಗೌಡ ಪರ ಯಡಿಯೂರಪ್ಪ ರೋಡ್ ಶೋ

ಗುರುವಾರ , ಏಪ್ರಿಲ್ 25, 2019
22 °C

ಬಿ.ಎನ್.ಬಚ್ಚೇಗೌಡ ಪರ ಯಡಿಯೂರಪ್ಪ ರೋಡ್ ಶೋ

Published:
Updated:

ದೊಡ್ಡಬಳ್ಳಾಪುರ: ನಗರದಲ್ಲಿ ಮಂಗಳವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರ ಪರವಾಗಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾನಾಡಿ, ರಾಜ್ಯದಲ್ಲಿ ಬಿಜೆಪಿ 22 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ದೇಶದ ಜನ ಮತ್ತೊಮ್ಮೆ ಮೋದಿ ಆಡಳಿತ ಬರಬೇಕು ಎನ್ನುವ ಕನಸು ಕಂಡಿದ್ದಾರೆ. ಇದರ ಸಾಕಾರಕ್ಕೆ ರಾಜ್ಯದ ಜನರು ಕೈಜೋಡಿಸಬೇಕು. ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ರೈತರ ಬದುಕು ಹಸನಾಗಿಸಲು ಒತ್ತು ನೀಡಲಾಗಿದೆ ಎಂದರು.

ರೋಡ್ ಶೋ ಅರ್ಧಕ್ಕೆ ಮೊಟಕು
ಮೈಸೂರಿನಲ್ಲಿ ನಡೆಯಲಿರಯವ  ಸಮಾವೇಶದಲ್ಲಿ ಭಾಗವಹಿಸುವ ಉದ್ದೇಶದಿಂದ ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಿ ಯಡಿಯೂರಪ್ಪ ನಿರ್ಗಮಿಸಿದರು. 

ಯಡಿಯೂರಪ್ಪ ಅವರ ನಿರ್ಗಮನದ ನಂತರ ನಗರದಲ್ಲಿ ನಡೆದ ರೋಡ್ ಶೋನಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯೆ ತೇಜಸ್ವಿ ರಮೇಶ್, ಬಚ್ಚೇಗೌಡ, ಮಾಜಿ ಶಾಸಕ ಜೆ.ನರಸಿಂಹ ಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !