ಚುನಾವಣೆಗೆ ಬಿಗಿ ಭದ್ರತೆ: ₹ 15 ಕೋಟಿ ನಗದು ಜಪ್ತಿ

ಶನಿವಾರ, ಏಪ್ರಿಲ್ 20, 2019
24 °C

ಚುನಾವಣೆಗೆ ಬಿಗಿ ಭದ್ರತೆ: ₹ 15 ಕೋಟಿ ನಗದು ಜಪ್ತಿ

Published:
Updated:

ಬೆಂಗಳೂರು: ‘ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮೊದಲ ಹಂತದ ಮತದಾನದಂದು ಬಿಗಿ ಭದ್ರತೆ ಕೈಕೊಳ್ಳಲಾಗುವುದು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಇದುವರೆಗೂ ಅಕ್ರಮವಾಗಿ ಸಾಗಿಸುತ್ತಿದ್ದ ₹15 ಕೋಟಿ ನಗದು ಜಪ್ತಿಮಾಡಲಾಗಿದೆ. 23,248 ಲೀಟರ್ ಮದ್ಯ, 3.1 ಕೆ.ಜಿ ಚಿನ್ನ, 43.85 ಕೆ.ಜಿ ಬೆಳ್ಳಿ ಸಹ ಜಪ್ತಿ ಮಾಡಲಾಗಿದೆ. ಆ ಬಗ್ಗೆ ಒಟ್ಟು 1,697 ಎಫ್ಐಆರ್ ದಾಖಲಿಸಲಾಗಿದೆ’ ಎಂದು ಹೇಳಿದರು.

ಮುಂಜಾಗ್ರತಾ ಕ್ರಮವಾಗಿ ಪರವಾನಗಿ ಹೊಂದಿದ್ದ 95,422 ಶಸ್ತ್ರಾಸ್ತ್ರಗಳನ್ನು ವಾಪಸು ಪಡೆಯಲಾಗಿದೆ‌. ಶಾಂತಿಗೆ ಭಂಗ ತರುವ 47,427 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ನೀಡಲಾಗಿದೆ ಎಂದರು.

ಮಂಡ್ಯ, ಹಾಸನ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳನ್ನು ಅತೀ ಸೂಕ್ಷ್ಮ ಕ್ಷೇತ್ರಗಳು ಎಂದು ಗುರುತಿಸಲಾಗಿದ್ದು, ಇಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನೀಲಮಣಿ ಹೇಳಿದರು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !