ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ 2019: ಬಿರುಸು ಪಡೆದ 2ನೇ ಹಂತದ ಮತದಾನ

Last Updated 18 ಏಪ್ರಿಲ್ 2019, 4:30 IST
ಅಕ್ಷರ ಗಾತ್ರ

ನವದೆಹಲಿ:ದೇಶದ 12 ರಾಜ್ಯಗಳಲ್ಲಿ 17ನೇ ಲೋಕಸಭೆಯ2ನೇ ಹಂತದ ಮತದಾನ ನಡೆಯುತ್ತಿದ್ದು ಮತದಾರರು ಹುರುಪಿನಿಂದ ಮತಚಲಾವಣೆ ಮಾಡುತ್ತಿದ್ದಾರೆ.

ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲೂ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು.

ಜಮ್ಮು ಕಾಶ್ಮೀರದ 2, ಮಹಾರಾಷ್ಟ್ರದ 10, ಕರ್ನಾಟಕದ 14, ತಮಿಳುನಾಡಿನ 38, ಪುದುಚೇರಿ 1, ಉತ್ತರಪ್ರದೇಶ 8, ಬಿಹಾರ 5, ಛತ್ತೀಸಗಡ 3, ಅಸ್ಸಾಂ 5, ಮಣಿಪುರ 1, ಒಡಿಶಾ 5 ಹಾಗೂ ಪಶ್ಚಿಮ ಬಂಗಾಳದ 3 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಬೆಳಗ್ಗೆಯಿಂದಲೇ ಜನರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅಂಗವಿಕಲರು ಮತ್ತು ವಯೋವೃದ್ದರು ಸಹಾಯಕರೊಂದಿಗೆ ಮತಗಟ್ಟೆಗೆ ಆಗಮಿಸುತ್ತಿದ್ದಾರು.

ಮತದಾನ ಮಾಡುವ ಮತಗಟ್ಟೆಗಳಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಪೂರ್ವನಿಗದಿಯಂತೆ 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲದ ಕಾರಣ ತ್ರಿಪುರಾದ ಒಂದು ಕ್ಷೇತ್ರದಲ್ಲಿ ಮತದಾನವನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ. ಭಾರಿ ಪ್ರಮಾಣದ ಹಣ ಪತ್ತೆಯಾದ ಕಾರಣ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT