ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಮತ ಚಲಾವಣೆಯಿಂದ ವಂಚಿತರಾದ 15 ಮಂದಿ

Last Updated 18 ಏಪ್ರಿಲ್ 2019, 6:45 IST
ಅಕ್ಷರ ಗಾತ್ರ

ಬೆಂಗಳೂರು: ಪದ್ಮನಾಭ ನಗರದ ಮತಕೇಂದ್ರ 172ರ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹಾಕಲಾಗಿದ್ದು, ಅದರಿಂದ 15ಕ್ಕೂ ಹೆಚ್ಚು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ‌.

ಕುಟುಂಬ ಸಮೇತರಾಗಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ಮತದಾರರು, ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.

ಹೆಸರು ಅಳಿಸಿದ್ದನ್ನು ಪ್ರಶ್ನಿಸಿದರು ಮತಗಟ್ಟೆಯ ಅಧಿಕಾರಿಗಳು ಯಾರೂ ಉತ್ತರಿಸಲಿಲ್ಲ‌. ಮತಗಟ್ಟೆ ಬಿಟ್ಟು ಹೊರ ಹೋಗಿ ಎಂದು ಉಡಾಫೆ ಉತ್ತರ ನೀಡಿ ಕಳುಹಿಸಿದರು.

ಒಂದೇ ಕುಟುಂಬದ ಮಕ್ಕಳಿಗೆ ಮತದಾನದ ಅವಕಾಶ ಸಿಕ್ಕಿದ್ದು, ತಂದೆ-ತಾಯಿಗೆ ಅವಕಾಶ ಇರಲಿಲ್ಲ. ಅವರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವೃದ್ಧೆ ವಿಜಯಲಕ್ಷ್ಮಿ, ‘ಕುಟುಂಬದವರೆಲ್ಲ ಒಂದೇ ಮನೆಯಲ್ಲಿದ್ದೇವೆ. ಮಗನಿಗೆ ಮತ ಹಕ್ಕು ನನಗೆ ಇಲ್ಲ. ಯಾವುದೇ ಮಾಹಿತಿ ನೀಡದೇ ಮನೆಗೂ ಬಂದು ವಿಚಾರಿಸದೇ ಹೆಸರು ಅಳಿಸಿದ್ದಾರೆ’ಎಂದರು.

‘ಈ ಬಗ್ಗೆ ವಿಚಾರಿಸಿದರೆ ಯಾರೊಬ್ಬರೂ ಸ್ಪಂದನೆ ನೀಡುತ್ತಿಲ್ಲ‘ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT