ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹಂಚಿಕೆ: ನಗರಸಭೆ ಸದಸ್ಯ ಮಂಜುನಾಥಾಚಾರಿ ವಿರುದ್ಧ ಪ್ರಕರಣ ದಾಖಲು 

ನೀತಿ ಸಂಹಿತೆ ಉಲ್ಲಂಘನೆ
Last Updated 18 ಏಪ್ರಿಲ್ 2019, 10:55 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಅಭ್ಯರ್ಥಿಗೆ(ವೀರಪ್ಪ ಮೊಯಿಲಿ) ಮತ ಹಾಕುವಂತೆ ಮತದಾರರಿಗೆ ನಗರಸಭೆ ಸದಸ್ಯ ಮಂಜುನಾಥಾಚಾರಿ ಅವರು ಹಣ ಹಂಚುತ್ತಿದ್ದ ವಿಡಿಯೊ ವೈರಲ್ ಆಗಿದ್ದು, ಚುನಾವಣಾಧಿಕಾರಿಗಳು ಮಂಜುನಾಥಾಚಾರಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಆವರಣದಲ್ಲಿನ ಪೊಲೀಸ್ ವಸತಿ ಗೃಹಗಳ ಹಿಂಭಾಗದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಜುನಾಥಾಚಾರಿ ಅವರು ರಾಜಾರೋಷವಾಗಿ ಮತದಾರರಿಗೆ ತಲಾ ₹200 ರಿಂದ ₹300 ಹಣ ಹಂಚುತ್ತಿದ್ದರು. ಇದು ಬೆಳಕಿಗೆ ಬರುತ್ತಿದ್ದಂತೆ ಕ್ಷಿಪ್ರ ಸಂಚಾರಿ ತಂಡದ ಅಧಿಕಾರಿ ಸಂಜೀವಪ್ಪ ಅವರು ಜಿಲ್ಲಾ ಚುನಾವಣಾಧಿಕಾರಿ ಅವರ ನಿರ್ದೇಶನದ ಮೆರೆಗೆ ದೂರು ದಾಖಲಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮಂಜುನಾಥಾಚಾರಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT