ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ನರೇಂದ್ರ ಮೋದಿ?

ಬುಧವಾರ, ಏಪ್ರಿಲ್ 24, 2019
32 °C
ಲೋಕಸಭೆ ಚುನಾವಣೆ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ನರೇಂದ್ರ ಮೋದಿ?

Published:
Updated:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ದಿ.ಅನಂತ್‌ ಕುಮಾರ್‌ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಿಂದ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ಗೆ ಟಿಕೆಟ್‌ ತಡೆಹಿಡಿದಿರುವುದರಿಂದ ಈ ಅನುಮಾನ ವ್ಯಕ್ತವಾಗಿದೆ.

ಈ ಕ್ಷೇತ್ರವನ್ನು1996ರಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಂತ್‌ ಕುಮಾರ್‌ ಕಳೆದ ನವೆಂಬರ್‌ನಲ್ಲಿ ಮೃತಪಟ್ಟಿದ್ದರು. ಹೀಗಾಗಿ ಇಲ್ಲಿಂದ ತೇಜಸ್ವಿನಿ ಅವರನ್ನೇ ಕಣಕ್ಕಿಳಿಸಲು ರಾಜ್ಯ ಮುಖಂಡರು ಒಲವು ತೋರಿದ್ದರು. ಅದರ ನಡುವೆಯೂ ಟಿಕೆಟ್‌ ಘೋಷಣೆ ಬಾಕಿ ಉಳಿಸಿಕೊಂಡಿರುವುದು ಕಾರ್ಯಕರ್ತರು ಹಾಗೂ ವಿಪಕ್ಷ ನಾಯಕರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿಲೋಕಸಭಾ ಚುನಾವಣೆ: ಬಿಜೆಪಿ 182 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಪ್ರಧಾನಿ ಮೋದಿ ಅವರು 2014ರ ಚುನಾವಣೆಯಂತೆ ಈ ಬಾರಿಯೂ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ ಬಿಜೆಪಿಯ ಬಿಗಿ ಹಿಡಿತ ಹೊಂದಿರುವ ಈ ಕ್ಷೇತ್ರದ ಮೇಲೆ ಅವರು ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿ ಗುಜರಾತಿನ ವಡೋದರ ಹಾಗೂ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರಗಳಿಂದ ಕಣಕ್ಕಿಳಿದು ಗೆದ್ದಿದ್ದರು. ಬಳಿಕ ವಡೋದರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಬಾರಿ ಗುಜರಾತ್‌ನಿಂದ ಸ್ಪರ್ಧಿಸುವುದಿಲ್ಲ ಎಂದೂ ಹೇಳಲಾಗಿದೆ.

ಕರ್ನಾಟಕವು ಒಟ್ಟು 28 ಲೋಕಸಭೆ ಸ್ಥಾನಗಳನ್ನು ಹೊಂದಿದೆ. ಅದರಲ್ಲಿ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ವಲಸಿಗರಿಗೆ ಬಿಜೆಪಿ ಮಣೆ: ಹಾಸನದಿಂದ ಎ.ಮಂಜು, ಕಲಬುರ್ಗಿಯಿಂದ ಉಮೇಶ ಜಾಧವ ಸ್ಪರ್ಧೆ

ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಆದರೆ ಅದು ಅಸಾಧ್ಯ ಎಂಬುದು ಪಕ್ಷದ ಆಂತರಿಕ ಸಮೀಕ್ಷೆಗಳಿಂದ ತಿಳಿದುಬಂದಿದೆ.

ಮೋದಿ ಸ್ಪರ್ಧೆ ಕುರಿತು ಮಾತನಾಡಿರುವ ರಾಜ್ಯ ನಾಯಕರೊಬ್ಬರು, ‘ಇದೊಂದು ಉತ್ತಮ ತಂತ್ರವಾಗಲಿದೆ. ಒಂದುವೇಳೆ ಮೋದಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಅದರಿಂದ ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ಸಂಖ್ಯೆ ಹೆಚ್ಚುವುದು ಮಾತ್ರವಲ್ಲದೇ, ದಕ್ಷಿಣದ ರಾಜ್ಯಗಳಲ್ಲಿ ಪಕ್ಷದ ಬಲವೂ ವೃದ್ಧಿಸಲಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 2

  Frustrated
 • 8

  Angry

Comments:

0 comments

Write the first review for this !