ನೆಹರು,ಇಂದಿರಾ ಸೈನ್ಯ ಕಟ್ಟುವಾಗ ಮೋದಿಗೆ ಚಡ್ಡಿ ಹಾಕಲು ಬರುತ್ತಿರಲಿಲ್ಲ:ಕಮಲ್ ನಾಥ್

ಶುಕ್ರವಾರ, ಏಪ್ರಿಲ್ 26, 2019
24 °C

ನೆಹರು,ಇಂದಿರಾ ಸೈನ್ಯ ಕಟ್ಟುವಾಗ ಮೋದಿಗೆ ಚಡ್ಡಿ ಹಾಕಲು ಬರುತ್ತಿರಲಿಲ್ಲ:ಕಮಲ್ ನಾಥ್

Published:
Updated:

ಭೋಪಾಲ್: ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ದೇಶದ ಸೇನಾ ಪಡೆಯನ್ನು ಕಟ್ಟುವಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಯಾಗಿ ಚಡ್ಡಿ ಹಾಕಲು ಬರುತ್ತಿರಲಿಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್ ವ್ಯಂಗ್ಯವಾಡಿದ್ದಾರೆ.

ಖಂಡ್ವ ಜಲ್ಲೆಯ ಹೊರಸೂದು ಗ್ರಾಮದಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದಾಗಲೇ ಅತಿ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿದೆ. ಮೋದಿಯವರು ಪೈಜಾಮ ಮತ್ತು ಚಡ್ಡಿ ಹಾಕಲು ಕಲಿಯುವ ಮೊದಲೇ ಮಾಜಿ ಪ್ರಧಾನಿ ನೆಹರು ಮತ್ತು ಇಂದಿರಾ ಗಾಂಧಿ ದೇಶದ ನೌಕಾ ಪಡೆ, ವಾಯು ಪಡೆಯನ್ನು ಕಟ್ಟಿದ್ದಾರೆ, ಮೋದಿ ದೇಶದ ಭದ್ರತೆಯ ಬಗ್ಗೆ ಮಾಡುತ್ತಾರೆ,2014ಕ್ಕೂ ಮೊದಲು ದೇಶವು ಸುರಕ್ಷಿತವಾಗಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಪಲ್ವಾಮಾ ಭಯೋತ್ಪಾದಕ ದಾಳಿ ಮತ್ತು ಬಾಲಕೋಟ್‌ನ ಮೇಲಿನ ವಾಯು ದಾಳಿಯನ್ನು ಪ್ರಧಾನಿ ಮೋದಿ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಯಾವ ಸರಕಾರ ಕೇಂದ್ರದಲ್ಲಿದ್ದಾಗ ಹೆಚ್ಚು ಭಯೋತ್ಪಾದಕ ದಾಳಿಯಾಗಿದೆ? 2001ರ ಪಾರ್ಲಿಮೆಂಟ್ ದಾಳಿ ನಡೆದಾಗ ಕೇಂದ್ರದಲ್ಲಿ ಯಾರ ಸರಕಾರ ಇತ್ತು ? ಬಿ.ಜೆ.ಪಿ ಸರಕಾರ ಕೇಂದ್ರದಲ್ಲಿದ್ದಾಗ ಹೆಚ್ಚು ಭಯೋತ್ಪಾದಕ ದಾಳಿಗಳಾಗಿವೆ ಎಂದು ಅಂಕಿ ಅಂಶಗಳು ತಿಳಿಸುತ್ತದೆ.

ಮೋದಿ 2 ಕೋಟಿ ಉದ್ಯೋಗದ ಭರವಸೆಯು ನೀಡಿದ್ದಾರೆ. ಯುವಕರಿಗೆ ಉದ್ಯೋಗ ಸಿಕ್ಕಿದೆಯೇ ಎಂದು ಪ್ರಶ್ನಿಸಿದರು. ಅಚ್ಚೆ (ಒಳ್ಳೆಯ)ದಿನ್‌ ಬಂದಿದೆಯೇ? ಕಪ್ಪು ಹಣ ಎಲ್ಲಿದೆ ಎಂದು ಕಮಲ್ ನಾಥ್ ಅವರು ಮೋದಿ ಸರಕಾರವನ್ನು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೋದಿ ಮುಖ್ಯಮಂತ್ರಿ ಕಮಲ್ ನಾಥ್ ರನ್ನ ಭ್ರಷ್ಟನಾಥ್ ಎಂದು ಕರೆದಿದ್ದರು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !