ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗೋಷ್ಠಿ ಜಟಾಪಟಿ

Last Updated 22 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ನವದೆಹಲಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಬೇಕಿದ್ದ ಕಾಂಗ್ರೆಸ್‌ನ ಮಾಧ್ಯಮಗೋಷ್ಠಿ ಮುಂದೂಡಿದ್ದು, ಟ್ವಿಟರ್‌ನಲ್ಲಿ ಸ್ವಾರಸ್ಯಕರ ಚರ್ಚೆ ಮತ್ತು ಟ್ರಾಲ್‌ಗೆ ಕಾರಣವಾಯಿತು.

ಈ ಸುದ್ದಿ ಪ್ರಕಟವಾಗುತ್ತಿದ್ದಂತೆ, ‘ಬೇಗ ಏಳಲು ರಾಹುಲ್ ಗಾಂಧಿಗೆ ಸಾಧ್ಯವಾಗದೆ ಇರಬಹುದು’ ಎಂದು ಬಿಜೆಪಿ ಕಾಲೆಳಿಯಿತು. ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡುವ ಮುನ್ನವೇ ಟ್ವಿಟ್ಟಿಗರು ಬಿಜೆಪಿಯ ಕಾಲೆಳೆದರು.

‘ರಾಹುಲ್ ಗಾಂಧಿ ಹಲವು ಮಾಧ್ಯಮಗೋಷ್ಠಿಗಳನ್ನು ಬೆಳಿಗ್ಗೆಯೇ ನಡೆಸಿದ್ದಾರೆ. ಕೆಲವೊಂದು ಬೆಳಿಗ್ಗೆ 8–9 ಗಂಟೆಗೇ ನಡೆದಿವೆ. ಐದು ವರ್ಷ ಕಳೆದೇ ಹೋಯಿತು, ಪ್ರಧಾನಿ ಮೋದಿ ಮಾಧ್ಯಮಗೋಷ್ಠಿ ನಡೆಸುವುದು ಯಾವಾಗ ಮತ್ತು ರಾಹುಲ್‌ ಗಾಂಧಿಯಂತೆ ಪ್ರಶ್ನೆಗೆ ಉತ್ತರಿಸುವುದು ಯಾವಾಗ?’ ಎಂದು ಸರಳಾ ಪಟೇಲ್ (@SaralPatel) ಎಂಬುವವರು ಟ್ವೀಟ್ ಮಾಡಿದ್ದಾರೆ.

ಇನ್ನೂ ಹಲವು ಟ್ವಿಟ್ಟಿಗರು ‘ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗೋಷ್ಠಿ ನಡೆಸಲಿ’ ಎಂದುಆಗ್ರಹಿಸಿದ್ದಾರೆ.

* ಬೆಳಿಗ್ಗೆ 10.15ಕ್ಕೆ ರಾಹುಲ್ ಗಾಂಧಿ ಅವರು ನಡೆಸಬೇಕಿದ್ದ ವಿಶೇಷ ಮಾಧ್ಯಮಗೋಷ್ಠಿ ಮಧ್ಯಾಹ್ನ 1ಕ್ಕೆ ಮುಂದೂಡಲ್ಪಟ್ಟಿದೆ

ಎಎನ್‌ಐ ಟ್ವೀಟ್

* ಬಹುಶಃ ಬೆಳಿಗ್ಗೆ ಬೇಗನೆ ಏಳಲು ರಾಹುಲ್ ಗಾಂಧಿಗೆ ಸಾಧ್ಯವಿಲ್ಲದೇ ಇರಬಹುದು. ಒಳ್ಳೆಯದೇ ಆಯಿತು, ಬೆಳಿಗ್ಗೆ– ಬೆಳಿಗ್ಗೆ ಸುಳ್ಳನ್ನು ಹರಡುವುದು ಒಳ್ಳೆಯದಲ್ಲ

ಬಿಜೆಪಿ ಟ್ವೀಟ್

* ಬೆಳಿಗ್ಗೆ, ಮಧ್ಯಾಹ್ನ ಅಥವಾ ರಾತ್ರಿ. ಕಳ್ಳ ಕಾವಲುಗಾರ (ಚೋರ್‌ ಚೌಕೀದಾರ್) ಯಾವಾಗ ಮಾಧ್ಯಮಗೋಷ್ಠಿ ನಡೆಸಿದರೂ (ನಡೆಸಲು ಸಮರ್ಥರಿದ್ದರೆ) ಕೇಳಲು ನಾವು ಸಿದ್ಧರಿದ್ದೇವೆ

–ಕಾಂಗ್ರೆಸ್ ಟ್ವೀಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT