ಐದು ಉದ್ಯಾನಗಳಲ್ಲಿ ಹಸಿರು ಸಂಭ್ರಮ

ಗುರುವಾರ , ಜೂನ್ 27, 2019
26 °C
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ವತಿಯಿಂದ ಪರಿಸರ ದಿನಾಚರಣೆ

ಐದು ಉದ್ಯಾನಗಳಲ್ಲಿ ಹಸಿರು ಸಂಭ್ರಮ

Published:
Updated:
Prajavani

ಬೆಂಗಳೂರು: ಬೆಳಕು ಹರಿದು ಬಿಸಿಲು ಏರುವ ಮುನ್ನವೇ ನಗರದ ಉದ್ಯಾನಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದವು. ಸರತಿಸಾಲಿನಲ್ಲಿ ನಿಂತಿದ್ದ ಜನ ಸಸಿಗಳನ್ನು ಪಡೆದು ಹೊಸ ಹುಮ್ಮಸ್ಸಿನೊಂದಿಗೆ ಹೆಜ್ಜೆ ಹಾಕಿದರು. ಗಿಡಗಳನ್ನು ನೆಟ್ಟು ಸಂಭ್ರಮಪಟ್ಟರು.

ವಿಶ್ವ ಪರಿಸರ ದಿನದ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಬುಧವಾರ ನಗರದ ಐದು ಉದ್ಯಾನಗಳಲ್ಲಿ ಹಸಿರು ಪ್ರೀತಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ವಾಯು ವಿಹಾರಕ್ಕಾಗಿ ನಸುಕಿನಲ್ಲಿ ಉದ್ಯಾನಗಳಿಗೆ ಬಂದಿದ್ದ ಜನರಿಗೆ ಗಿಡಗಳನ್ನು ವಿತರಿಸಲಾಯಿತು. 

ಜಿಂಕೆ ಪಾರ್ಕ್: ಚಾಮರಾಜಪೇಟೆಯ ಜಿಂಕೆ ಪಾರ್ಕ್‌ನಲ್ಲಿ ಸಸಿ ನೆಟ್ಟು ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ, ‘ಜೂನ್ 5ರಂದು ಸಸಿ ನೆಡುವುದು ಸಾಂಕೇತಿಕ ಅಷ್ಟೇ. ಅದರಾಚೆಗೂ ಪರಿಸರ ಸಂರಕ್ಷಣೆಯ ಹೊಣೆ ಎಲ್ಲರ ಮೇಲಿದೆ. ಹಸಿರು ಸಂರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ, ಪ್ರತಿಯೊಬ್ಬ ಪ್ರಜೆ ಮತ್ತು ಸಂಘ–ಸಂಸ್ಥೆಗಳ ಕರ್ತವ್ಯವೂ ಆಗಿದೆ’ ಎಂದರು.

‘ಭಾರತಕ್ಕೆ ಹೋಲಿಸಿದರೆ ಭೂತಾನ್ ಅತ್ಯಂತ ಚಿಕ್ಕ ದೇಶ. ಅವರು ಪರಿಸರದೊಂದಿಗೆ ಬೆರೆತು ಹೋಗಿದ್ದಾರೆ. ಹೀಗಾಗಿ ಆಸ್ಪತ್ರೆಗಳೇ ಅವರಿಗೆ ಬೇಕಿಲ್ಲ’ ಎಂದು ಹೇಳಿದರು.

ಎಂ.ಎನ್. ಕೃಷ್ಣರಾವ್ ಉದ್ಯಾನ: ಬಸವನಗುಡಿಯ ಎಂ.ಎನ್. ಕೃಷ್ಣರಾವ್ ಉದ್ಯಾನದಲ್ಲಿ ನಡೆದ ಪರಿಸರ ದಿನಾಚರಣೆಯನ್ನು ಕಿರುತೆರೆ ನಟಿ ಡಾ. ವತ್ಸಲಾ ಮೋಹನ್ ಉದ್ಘಾಟಿಸಿದರು.

‘ಬೆಂಗಳೂರು ದಕ್ಷಿಣ ಭಾಗ ಹಚ್ಚ ಹಸಿರಿನಿಂದ ಕೂಡಿದ್ದ ದಿನಗಳು ನನಗೆ ಇಂದಿಗೂ ನೆನಪಿದೆ. ಆದರೆ, ಇಂದು ಆ ಹಸಿರು ಸಮೃದ್ಧಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆರ್ಥಿಕವಾಗಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಆದರೆ, ಪರಿಸರವನ್ನು ಕಾಪಾಡಿಕೊಳ್ಳದೆ ಇದ್ದರೆ ಯಾವುದರಲ್ಲೂ ಪರಿಪೂರ್ಣತೆ ಇರುವುದಿಲ್ಲ’ ಎಂದರು.

ಇಂದಿರಾನಗರ: ಇಂದಿರಾನಗರದ ಬಿಬಿಎಂಪಿ ಉದ್ಯಾನದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸೇರಿದ್ದ ನೂರಾರು ಮಂದಿಗೆ ಸಸಿ ವಿತರಿಸಿದರು. 

ಜೆ.ಪಿ. ಪಾರ್ಕ್‌: ಮತ್ತಿಕೆರೆ ಜೆ.ಪಿ. ಉದ್ಯಾನದ ಜೆ.ಪಿ. ಪಾರ್ಕ್ ವೆಲ್ಫೇರ್‌ ಅಸೋಸಿಯೇಷನ್ ಅಧ್ಯಕ್ಷ  ಎಸ್‌.ರಾಮಕೃಷ್ಣರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ನೂರಾರು ಜನ ಸಾಲಿನಲ್ಲಿ ನಿಂತು ಸಸಿಗಳನ್ನು ಪಡೆದುಕೊಂಡರು.

ಸ್ಯಾಂಕಿ ಕರೆ: ಸ್ಯಾಂಕಿ ಕೆರೆ ಉದ್ಯಾನದಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್‌ ಅಧಿಕಾರಿ ಜಿ.ಎ. ಬಾವ ಉದ್ಘಾಟಿಸಿ ಸಸಿ ವಿತರಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !