ಎಲ್ಲ ತತ್ವಕ್ಕಿಂತ ಮನುಷ್ಯತ್ವವೇ ಶ್ರೇಷ್ಠ..!

7

ಎಲ್ಲ ತತ್ವಕ್ಕಿಂತ ಮನುಷ್ಯತ್ವವೇ ಶ್ರೇಷ್ಠ..!

Published:
Updated:

ಲಿಂಗವನ್ನು ನಿತ್ಯವೂ ನೋಡುವುದರಿಂದ ಕಣ್ಣು ಶುದ್ಧವಾಗುತ್ತದೆ. ವಿಕಾರತೆ ದೂರವಾಗುತ್ತದೆ. ಕಾಯದಲ್ಲಿ ಕಳವಳ, ಪ್ರಾಣದಲ್ಲಿ ಮಾಯೆ ಇದ್ದರೆ, ದೇಹ ಲಿಂಗಮಯವಾಗಲು ಸಾಧ್ಯವಿಲ್ಲ. ಬಸವಾದಿ ಶರಣರಲ್ಲಿ ಅಂತರಂಗದ ಭಾವ ಇತ್ತು. ಅವರು ಶ್ರೇಷ್ಠರೆನಿಸಿಕೊಂಡರು.

ಜಗತ್ತಿನಲ್ಲಿ ಹೆಣ್ಣು ಅಬಲೆಯಲ್ಲ, ಸಬಲೆ. ಅಕ್ಕಮಹಾದೇವಿಯ ಹಾಗೆ ಪ್ರತಿಯೊಬ್ಬರೂ ಅರಿವಿನ ಪ್ರಜ್ಞೆ ಹೊಂದಬೇಕು. ನಮಗೆ ಸ್ವಾಭಿಮಾನ ಕಾಡುತ್ತಿದೆ. ಒಬ್ಬರ ಮನಸ್ಸನ್ನು ನೋಯಿಸುವುದು, ಅವರನ್ನು ಹಾಳು ಮಾಡುವುದು ಸ್ವಾಭಿಮಾನವಲ್ಲ. ಸರಳ ಜೀವನ ಇರಬೇಕು. ಅಕ್ಕಮಹಾದೇವಿ ಮನಸ್ಸು ಮಾಡಿದ್ದರೆ, ಅರಮನೆಯ ರಾಣಿಯಾಗಬಹುದಿತ್ತು. ಮನಸ್ಸನ್ನು ಚನ್ನಮಲ್ಲಿಕಾರ್ಜುನನಿಗೆ ಅರ್ಪಿಸಿ ಸರಳ ಜೀವನ ನಡೆಸಿದರು. ನಿರ್ವಿಕಾರ ಸಮಾಧಿ ಯೋಗ ಅದ್ಭುತವಾದುದು. ಅದನ್ನು ಸಾಧಿಸಿದರೆ ಅಂತರಂಗ ತರಂಗದ ಭಾವ ಉನ್ನತ ಮಟ್ಟಕ್ಕೆ ತಲುಪುತ್ತದೆ. ನಾವು ಅಂತರಂಗದಲ್ಲಿ ಪಡೆದ ಜ್ಞಾನವನ್ನು ಬಾಹ್ಯವಾಗಿ ತಿಳಿಸಬೇಕು.

ಮನುಷ್ಯ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡರೆ, ಆತನ ಕುಟುಂಬ ಸುಖಿಯಾಗಿರುತ್ತದೆ. ಗುರುವಿನ ಅನುಗ್ರಹ ಪಡೆದುಕೊಳ್ಳಬೇಕು. ಈ ಜಗತ್ತಿನಲ್ಲಿ ಎಲ್ಲವೂ ಸುಳ್ಳು. ಸಮಾಜಕ್ಕಾಗಿ ಏನನ್ನು ನೀಡದವನ ಮನೆಯಲ್ಲಿ ಸಾಕಷ್ಟು ಸಂಪತ್ತು ಇದ್ದರೇನು ಫಲ. ವ್ಯಕ್ತಿ ಬದುಕಿದಾಗ ಆತನ ಬೆಲೆ ಗೊತ್ತಾಗಲಾರದು. ಮಹಾತ್ಮರು ಸಮಾಜಕ್ಕಾಗಿ ಬದುಕಿದರು. ಅವರು ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.

ಕಾವಿ ಹಾಕಿದ ಎಲ್ಲರೂ ಗುರು ಅಲ್ಲ. ತನುವಿಗೆ ತನು, ಮನಕ್ಕೆ ಮನ ಕೊಡುವವರು ನಿಜವಾದ ಗುರು. ಆಪತ್‌ಕಾಲದಲ್ಲಿ ನಮ್ಮನ್ನು ಕೈಹಿಡಿದುಕೊಂಡು ಹೋಗಬೇಕು. ಸನ್ಯಾಸಿಗಳು ಸಮಾಜದ ಋಣ ತೀರಿಸಬೇಕು. ಜಗತ್ತಿನಲ್ಲಿ ಭಕ್ತರೇ ದೊಡ್ಡವರು. ಮೂಢನಂಬಿಕೆ ಬಿಡಿ. ಬಸವಣ್ಣನವರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ. ಧರ್ಮದ ವಿಚಾರದಲ್ಲಿ ದೇಶದಲ್ಲಿ ಸಹಿಷ್ಣುತೆ ಬರಬೇಕಾಗಿದೆ. ನಮಗಾಗಿ ನಾವು ಬಡಿದಾಡಬಾರದು. ಆ ತತ್ವ, ಈ ತತ್ವಕ್ಕಿಂತ ಮನುಷ್ಯತ್ವವೇ ಶ್ರೇಷ್ಠ.

ಸಂಗ್ರಹ: ಪ್ರಕಾಶ.ಎನ್‌.ಮಸಬಿನಾಳ

ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಪ್ರವಚನ ಸಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !