ನಿಶಬ್ಧತೆಯಿಂದ ಪರಮಶಾಂತಿ

7

ನಿಶಬ್ಧತೆಯಿಂದ ಪರಮಶಾಂತಿ

Published:
Updated:

ವ್ಯಾಸ ಮಹರ್ಷಿಗಳು ಧರ್ಮದರ್ಶಿಗಳು. ತತ್ವಶಾಸ್ತ್ರವನ್ನು ಸುಂದರವಾಗಿ ಮೂಡಿಸಿದವರು. ಜೀವನದ ಗುರಿ ಏನು ? ಅದನ್ನು ಪಡೆಯುವುದಕ್ಕಾಗಿ ಸಾಧನೆ ಯಾವುದು ? ಅದು ಒಂದೇ ಗುರಿ ಪರಮಶಾಂತಿಯನ್ನು ಅನುಭವಿಸುವುದು. ನೂರು ವರ್ಷ ನಾವು ಬದುಕುವುದು ಏತಕ್ಕೆ ? ಮನೆ–ಮಾರು ಕಟ್ಟಿಕೊಳ್ಳುವುದು, ಕಲೆ–ಸಂಸ್ಕೃತಿ ಬೆಳೆಸುವುದು. ಯಾತಕ್ಕಾಗಿ ? ನಾವು ಏತಕ್ಕೆ ಬಂದು ಏನು ಮಾಡುತ್ತಿದ್ದೆವೆಂದು ಸ್ಪಷ್ಟತೆ ಇರುವುದಿಲ್ಲ. ಭೂಮಿ, ಸಂಪತ್ತು, ಅಧಿಕಾರ ಅನುಭವಿಸುವುದೇ ಜೀವನ ಎಂದುಕೊಂಡವರೇ ಹೆಚ್ಚಿದ್ದಾರೆ. ಮನುಕುಲದ ಬಗ್ಗೆ ಇವರಿಗೆ ಗೊತ್ತಿಲ್ಲ. ಇಲ್ಲಿ ಸಾಧನೆ, ಸಿದ್ಧಿ ಯಾವುದೆಂದರೇ ಶಾಂತಿ.

1) ತಾತ್ಕಾಲಿಕ ಶಾಂತಿ–ತಾಪವಾದ ಬಳಿಕ, ಗದ್ದಲ ಮುಗಿದ ಪ್ರೀತಿ ಇರುವುದು (ತಣ್ಣಗೆ). 2) ಪರಮ ಶಾಂತಿ–ಇದು ಕಾಯಂ ಆಗಿ ಇರುವುದೇ ಆಗಿದೆ.
ಜಗತ್ತಿನ ಹೊಯ್ದಾಟ, ಜಂಜಾಟ, ತೊಳಲಾಟ ಇವುಗಳ ಮಧ್ಯದಲ್ಲಿ ಪರಮಶಾಂತಿ ಪಡೆಯುವುದು, ಜೀವನದಲ್ಲಿ ತೆರೆಗಳು, ಏರಿಳಿತಗಳು, ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ ಮಧ್ಯದಲ್ಲಿ ನಾವು ನೆಮ್ಮದಿ, ಶಾಂತಿಯಿಂದಿರಬೇಕು ಎನ್ನುವುದು ಎಲ್ಲರ ಅಭಿಪ್ರಾಯ. ದೃಷ್ಟಿಕೋನ ಬೇರೆ ಬೇರೆ ಇರುವುದರಿಂದ ಎಲ್ಲರನ್ನೂ ಸಮಾಧಾನಪಡಿಸಿ, ನಾವು ಸಮಾಧಾನ ಪಡುವುದು, ಶಾಂತಿ ಪಡೆಯುವುದು ಯಾವಾಗ ?

ಬಸವಣ್ಣನವರು ಪರ ಚಿಂತೆ ನಿಮಗೇಕಯ್ಯ. ನಮ್ಮ ಚಿಂತೆ ನಮಗೆ ಸಾಲದೆ ? ಕೂಡಲಸಂಗಯ್ಯ ಒಲಿದನೋ, ಒಲಿಯನೋ ಎಂಬ ಚಿಂತೆ. ಪರಮಶಾಂತಿಗೆ ವ್ಯಾಸ ಸೂತ್ರ ಹೇಳಿದ. ಪರಮಶಾಂತಿಯೇ ದೇವರು. ಇಡಿ ವಿಶ್ವದ ತುಂಬಾ ಪರಮಶಾಂತಿ ತುಂಬಿಕೊಂಡಿದೆ. ನಮ್ಮ ಮನಸ್ಸು, ಶಾಂತವಾದಾಗ ನಮ್ಮ ಅನುಭವಕ್ಕೆ ಬರುತ್ತದೆ. ಶ್ರದ್ಧೆ ಗಟ್ಟಿಯಾಗಿದ್ದರೆ ಜ್ಞಾನ. ಶ್ರದ್ಧೆ ಎಂದರೇ ಸತ್ಯದ ಭಾಗ. ಸತ್ಯ ಗ್ರಹಿಸುವುದೇ ಶ್ರದ್ಧೆ. ಯಾವುದು ಸದಾ ಉಳಿಯುತ್ತದೆಯೋ ಅದೇ ದೇವರು. ಅದೇ ಪರಮಶಾಂತಿ.

ಸಂಗ್ರಹ: ಡಾ.ವಿ.ಡಿ.ಐಹೊಳ್ಳಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !