ಗುರುವಾರ , ಡಿಸೆಂಬರ್ 5, 2019
21 °C

ಪ್ರಾಣಿ ಪ್ರಿಯರಿಗಾಗಿ ಪ್ರವಾಸ ಪ್ಯಾಕೇಜ್

Published:
Updated:

ಪ್ರವಾಸದ ಗುರಿ, ಉದ್ದೇಶ, ಅನುಭವ ಒಂದೊಂದು ಬಾರಿಯೂ ಒಂದೊಂದು ರೀತಿ. ಇಲ್ಲೊಂದು ಕೊಂಚ ಭಿನ್ನ ಅನುಭವ ಕಟ್ಟಿಕೊಡುವ ಪ್ರವಾಸದ ಮಾಹಿತಿ ಇದೆ.

ಮನೆಯಲ್ಲಿ ಸಾಕಿದ ನಾಯಿ, ಬೆಕ್ಕುಗಳ ಜತೆ ಆಟ ಸಾಮಾನ್ಯ. ಆದರೆ ವನ್ಯಜೀವಿ ತಾಣಗಳಲ್ಲೋ ಅಥವಾ ಟಿವಿಯಲ್ಲೋ ನೋಡಿದ ವಿವಿಧ ಪ್ರಾಣಿಗಳ ಜತೆ ಆಟವಾಡಲು, ಬೆರೆಯಲು ಅವಕಾಶ ದೊರಕಿದರೆ ಹೇಗಿರಬಹುದು? ಹೌದು ಪ್ರವಾಸಿ ವೆಬ್‌ಸೈಟ್‌ airbnb ಅಂತಹದ್ದೊಂದು ವಿಭಿನ್ನ ಪ್ರವಾಸಿ ಪ್ಯಾಕೇಜ್ ರೂಪಿಸಿದೆ. ಪ್ರಾಣಿಪ್ರಿಯರಾದಲ್ಲಿ ಈ ಪ್ರವಾಸ ಮೆಚ್ಚುಗೆಯಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಾಣಿಗಳನ್ನು ದೂರದಿಂದ ನೋಡಿ ಆನಂದಿಸುವವರು, ಅವುಗಳನ್ನು ಹತ್ತಿರದಿಂದ ಗಮನಿಸಿ ಅವುಗಳ ಜತೆ ಬೆರೆಯಲು ಸಹ ಅವಕಾಶ ದೊರಕುತ್ತದೆ. ಅವುಗಳ ಜತೆ ಆಟ ಸಹ ಆಡಬಹುದು. ಮನರಂಜನೆಯ ಮತ್ತೊಂದು ಮಜಲು ತಿಳಿಯಬಹುದು. ನೆನಪಿಡಬೇಕಾದ ಅಂಶವೆಂದರೆ ಪ್ರತಿಯೊಬ್ಬರೂ ವಿಶ್ವ ಪ್ರಾಣಿಸಂರಕ್ಷಣಾ ನಿಯಮಗಳನ್ನು ಅನುಸರಿಸುವುದು ಕಡ್ಡಾಯ. 

300ಕ್ಕೂ ಅಧಿಕ ರೀತಿಯ ಪ್ರಾಣಿಗಳನ್ನು ಒಳಗೊಂಡಂತೆ ಈ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ವನ್ಯಜೀವಿ ಸಂರಕ್ಷಕರು, ತಜ್ಞರು, ಅಪ್ಪಟ ಪ್ರಾಣಿ ಪ್ರಿಯರನ್ನು ಈ ಪ್ರವಾಸದಲ್ಲಿ ಭೇಟಿ ಮಾಡಬಹುದು. ಮನರಂಜನೆಯ ಜತೆ ಜ್ಞಾನ ವೃದ್ಧಿಗೂ ಅವಕಾಶ ದೊರಕುತ್ತದೆ.

ಆಸಕ್ತಿಗೆ ತಕ್ಕಂತೆ ಆಯ್ಕೆ

ಇದರ ಹೊರತಾಗಿ ವ್ಯಕ್ತಿಗಳ ಅಭಿರುಚಿ, ಆಸಕ್ತಿಗೆ ತಕ್ಕುದಾದಂತಹ ಪ್ರವಾಸ ಪ್ಯಾಕೇಜ್‌ಗಳು ಸಹ ಇವೆ. ಆಹಾರ ಪ್ರಿಯರಿಗೆ, ಸಾಹಸಿ ಪ್ರವೃತ್ತಿ ಉಳ್ಳವರಿಗೆ ಹೀಗೆ ವಿಭಿನ್ನ ವರ್ಗದ ಜನರು ಬೇಕಾದ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು.

ವಿವರಕ್ಕಾಗಿ https://www.airbnb.co.in/s/experiences ನೋಡಬಹುದು. ಇದರ ಹೊರತಾಗಿ ಬೇರೆ ಪ್ರವಾಸಿ ಪ್ಯಾಕೇಜ್‌ಗಳಿಗೆ https://www.airbnb.co.in ಗಮನಿಸಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು