ಸಮೀಕ್ಷಾ ವರದಿ ಬಹಿರಂಗಪಡಿಸಲು ಒತ್ತಾಯ

7

ಸಮೀಕ್ಷಾ ವರದಿ ಬಹಿರಂಗಪಡಿಸಲು ಒತ್ತಾಯ

Published:
Updated:

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಗಣತಿಯ ಸಮೀಕ್ಷೆಯ ವರದಿಯನ್ನು‌ ಕೂಡಲೇ ಬಹಿರಂಗಪಡಿಸಬೇಕು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.

‘ವರದಿಯನ್ನು ಒಪ್ಪಿಸಲು ಹಿಂದುಳಿದ‌ ಆಯೋಗದ‌ ಅಧ್ಯಕ್ಷರು ಸಮಯಾವಕಾಶ ಕೋರಿದ್ದರೂ, ಅದನ್ನು ಸ್ವೀಕರಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉತ್ಸಾಹ ತೋರುತ್ತಿಲ್ಲ. ಇದನ್ನು ನೋಡಿದರೆ ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಇಲ್ಲ ಎಂಬುದು ತಿಳಿಯುತ್ತಿದೆ’ ಎಂದು ಒಕ್ಕೂಟದ ಕಾರ್ಯಾಧ್ಯಕ್ಷ‌ ಸುರೇಶ್ ಎಂ.ಲಾತೂರು ದೂರಿದರು.

‘ಅಲ್ಲದೆ, ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಶೇ 53 ಇದೆ. ಅದನ್ನು ಶೇ 69ಕ್ಕೆ ಹೆಚ್ಚಿಸಬೇಕು. ಸಿದ್ದರಾಮಯ್ಯ ರೂಪಿಸಿದ್ದ ಯೋಜನೆಗಳನ್ನು ಈ ಸರ್ಕಾರದಲ್ಲೂ ಮುಂದುವರಿಸಿಕೊಂಡು ‌ಹೋಗಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !