ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

7
ಕಲಾವಿದರ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Published:
Updated:
ಸಾಮೂಹಿಕ ಅತ್ಯಾಚಾರ ಖಂಡಿಸಿ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು

ಚಾಮರಾಜನಗರ: ಜಾರ್ಖಂಡ್‌ನ ಚೋಚಾಂಗ್ ಜಿಲ್ಲೆಯಲ್ಲಿ ಐವರು ಬೀದಿನಾಟಕ ಕಲಾವಿದೆಯರ ಮೇಲೆ ಪಾತಾಳಗರಡಿ ಸಂಘಟನೆಯ ಕಾರ್ಯಕರ್ತರು ನಡೆಸಿರುವ ಸಾಮೂಹಿಕ ಅತ್ಯಾಚಾರ ಖಂಡಿಸಿ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

‘ಭಾರತದ ಉದ್ದಗಲಕ್ಕೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಹೇಯ ಕೃತ್ಯಗಳು ಆಗಾಗ್ಗೆ ಜರುಗುತ್ತಲೇ ಇದ್ದರೂ ಸರ್ಕಾರಗಳು ಯಾವುದೇ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೊಳಿಸುತ್ತಿಲ್ಲ. ಈ ಕೃತ್ಯಗಳಿಂದಾಗಿ ಇಡೀ ಮಾನವ ಕುಲವೇ ತಲೆತಗ್ಗಿಸುವಂತಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಅತ್ಯಂತ ಪ್ರಭಾವಿ ಮತ್ತು ಪರಿಣಾಮಕಾರಿ ಮಾಧ್ಯಮವಾದ ಬೀದಿನಾಟಕ ಪ್ರದರ್ಶಿಸುವ ಕಲಾವಿದರಿಗೆ ಯಾವುದೇ ಭದ್ರತೆ ಇಲ್ಲದಿರುವುದು ವಿಷಾದನೀಯ. ಇಂತಹ ಅಮಾನವೀಕ ಕೃತ್ಯ ಎಸಗಿದ ಪಾತಾಳಗರಡಿಯ ಕಾರ್ಯಕರ್ತರನ್ನು ಮತ್ತು ದುಷ್ಟರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಮತ್ತು ಜಾರ್ಖಂಡ್ ಸರ್ಕಾರವು ಸಂತ್ರಸ್ತ ಕಲಾವಿದರಿಗೆ ಪರಿಹಾರ ನೀಡಬೇಕು ಎಂದು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕಲೆ ನಟರಾಜು ಒತ್ತಾಯಿಸಿದರು.

ಒಕ್ಕೂಟದ ಶಾಂತರಾಜು, ಸಿದ್ದರಾಜು, ಚಂದ್ರಬಾಬು, ಪಿ. ಮಹೇಶ್, ಚಿಂಕರಮ್ಮ, ಸುಶೀಲಾ, ಮಾದಮ್ಮ ಬಸಮ್ಮ, ಪುಟ್ಟ ಮಾದಮ್ಮ ಇತರರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !