‘ನಾನು ಒಂದು ಅಭಿವ್ಯಕ್ತಿ, ನನ್ನನ್ನು ಉಳಿಸಿ’

ಮಂಗಳವಾರ, ಮಾರ್ಚ್ 26, 2019
27 °C
ಪತ್ರಿಕಾ ಸ್ವಾತಂತ್ರ್ಯದ ಹರಣದ ವಿರುದ್ಧ ಒಕ್ಕೊರಲ ಧ್ವನಿ

‘ನಾನು ಒಂದು ಅಭಿವ್ಯಕ್ತಿ, ನನ್ನನ್ನು ಉಳಿಸಿ’

Published:
Updated:
Prajavani

ಬೆಂಗಳೂರು: ‘ನಾನು ಒಂದು ಅಭಿವ್ಯಕ್ತಿ. ನನ್ನನ್ನು ಉಳಿಸಿ’, ‘ಪತ್ರಿಕಾ ಸ್ವಾತಂತ್ರ್ಯ ನಮ್ಮ ಹಕ್ಕು’, ‘ಎನ್‌.ರಾಮ್‌ ನಿಮ್ಮೊಂದಿಗೆ ನಾವಿದ್ದೇವೆ...’

ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಖಂಡಿಸಿ ಗ್ರಾಮ ಸೇವಾ ಸಂಘವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೇಳಿ ಬಂದ ಒಕ್ಕೊರಲ ಧ್ವನಿ ಇದು.

ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಜಮಾಯಿಸಿದ ಸಾಹಿತಿಗಳು, ಪ್ರಗತಿಪರರು, ಹೋರಾಟ
ಗಾರರು ಮತ್ತು ಪತ್ರಕರ್ತರು ದೇಶದಲ್ಲಿ ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಕಳವಳ ವ್ಯಕ್ತಪಡಿಸಿದರು.

‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಘೋಷಣೆ ಕೂಗುವ ಮೂಲಕ ಎನ್‌.ರಾಮ್‌ ಮತ್ತು ರವೀಶ್‌ ಕುಮಾರ್‌ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.

ನಟ ಪ್ರಕಾಶ್ ರೈ ಮಾತನಾಡಿ,‘ದೇಶ ಸಂಕಷ್ಟದ ಸ್ಥಿತಿಯಲ್ಲಿದೆ. ಅವ್ಯಾಹತವಾಗಿ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ಬೇತಾಳದ ಕಥೆಯಲ್ಲಿ ಸುಳ್ಳನ್ನು ಹೇಳಿದರೆ ತಲೆ ಎರಡು ಹೋಳಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಸುಳ್ಳು, ಸಾವಿರ ಓಟಾಗುತ್ತದೆ’ ಎಂದು ಬೇಸರಿಸಿದರು.

‘ಸತ್ಯ ಹೇಳಿದವರ ಮೇಲೆ ದಮನಕಾರಿ ನೀತಿ ಪ್ರಯೋಗಿಸಲಾಗುತ್ತಿದೆ. ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ. ಜನರ ಮನಸಾಕ್ಷಿ ಸತ್ತಿಲ್ಲ. ಇದೆಲ್ಲವನ್ನು ಗಮನಿಸುತ್ತಿದ್ದಾರೆ. ಸರಿಯಾದ ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ,‘ಸರ್ಕಾರವನ್ನು ಟೀಕಿಸುವುದನ್ನು ಅಪರಾಧ ಎಂದು ಬಿಂಬಿಸುವ ಮೂಲಕ ಸಂವಿಧಾನ ನೀಡಿದ ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದಾಖಲೆ ಸಂಗ್ರಹಿಸುವುದು ಪತ್ರಕರ್ತರ ಹಕ್ಕು. ಎನ್‌.ರಾಮ್‌ ಸತ್ಯವನ್ನು ಹೇಳುವ ಮೂಲಕ ಉಪಯುಕ್ತ ಕೆಲಸವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಅವರ ಬೆನ್ನಿಗೆ ನಿಲ್ಲಬೇಕಿದೆ’ ಎಂದು ಅವರು ಹೇಳಿದರು.

*****

ಪತ್ರಿಕಾ ಧರ್ಮ ಪಾಲನೆ ಮಾಡಿದವರ ವಿರುದ್ಧ ಕಾಯ್ದೆಗಳನ್ನು ಬಳಸಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ
-ಸುಗತ ಶ್ರೀನಿವಾಸರಾಜು, ಪತ್ರಕರ್ತ

ದೇಶದಲ್ಲಿ ಇಂದು 1975ರ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಎಚ್ಚೆತ್ತು ಹೋರಾಟ ಮಾಡಬೇಕಿದೆ
-ಬಿ.ಸುರೇಶ, ನಿರ್ದೇಶಕ

ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಪರಸ್ಪರರ ಹಕ್ಕನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕಿದೆ.
-ಮೂಡ್ನಾಕೂಡು ಚಿನ್ನಸ್ವಾಮಿ, ಕವಿ

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !