ಏರ್ ಶೋಗೆ ಕಪ್ಪು ಬಾವುಟ ಪ್ರದರ್ಶನ: ಎಚ್ಚರಿಕೆ

7

ಏರ್ ಶೋಗೆ ಕಪ್ಪು ಬಾವುಟ ಪ್ರದರ್ಶನ: ಎಚ್ಚರಿಕೆ

Published:
Updated:
Prajavani

ಹೆಸರಘಟ್ಟ: ‘ಸರ್ಕಾರವು ಫೆ 15ನೇ ದಿನಾಂಕದೊಳಗೆ ಶಿವರಾಮ ಕಾರಂತರ ಬಡಾವಣೆಯ ಸಮಸ್ಯೆಯನ್ನು ಇತ್ಯರ್ಥ ಮಾಡದಿದ್ದರೆ, ರಾಜ್ಯದ ಬೇರೆ ಬೇರೆ ಭಾಗಗಳಿಂದ ರೈತರು ಬಂದು ಬಿ.ಡಿ.ಎ. ಕಚೇರಿಗೆ ಬೀಗ ಹಾಕಲಿದ್ದಾರೆ. ಮಾತ್ರವಲ್ಲ ಏರ್ ಶೋಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

ದೊಡ್ಡ ಬ್ಯಾಲಕೆರೆ ಗ್ರಾಮದಲ್ಲಿ ಬಿ.ಡಿ.ಎ. ಅಧಿಕಾರಿಗಳ ವಿರುದ್ದ ನಡೆಸುತ್ತಿರುವ ಸತ್ಯಾಗ್ರಹನಿರತ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಶಿವರಾಮ ಕಾರಂತರ ಬಡಾವಣೆಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರು ಬಿ.ಡಿ.ಎ. ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದರು. ಆದರೆ ತಿಂಗಳು ಕಳೆದರೂ ಮುಖ್ಯಮಂತ್ರಿಗೆ ರೈತರ ಸಮಸ್ಯೆಯನ್ನು ಆಲಿಸುವ ಕನಿಷ್ಠ ಸಮಯ ಇಲ್ಲವಾಗಿದೆ’ ಎಂದರು.

ಶಿವರಾಮ ಕಾರಂತರ ಬಡಾವಣೆ ಹೋರಾಟ ಸಮಿತಿ ಅಧ್ಯಕ್ಷರಾದ ನಂಜುಂಡಪ್ಪ ಮಾತನಾಡಿ, ‘ಶಿವರಾಮ ಕಾರಂತ ಬಡಾವಣೆ ಜಮೀನಿನಲ್ಲಿ ಈಗಾಗಲೇ 25 ಸಾವಿರ ನಿವೇಶನಗಳು ಆಗಿವೆ. ಈ ಮನೆಗಳ ನಿರ್ಮಾಣಕ್ಕೆ ಅನುಮತಿಯನ್ನು ಬಿ.ಡಿ.ಎ. ಅಧಿಕಾರಿಗಳೇ ನೀಡಿದ್ದಾರೆ. ಮನೆ ಕಟ್ಟಿಕೊಂಡ ನಿವೇಶನದಾರರು ಈಗ ಎಲ್ಲಿಗೆ ಹೋಗಬೇಕು? ಸಮಸ್ಯೆ ಗಂಭೀರವಾಗಿದ್ದು ಸರ್ಕಾರ ಮಧ್ಯೆ ಪ್ರವೇಶಿಸಿ ಇತ್ಯರ್ಥ ಮಾಡಬೇಕು. ಇಲ್ಲದಿದ್ದರೆ ರೈತರ ಹೋರಾಟದ ಸ್ವರೂಪವೇ ಬದಲಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !