ಪಂಚಾಯಿತಿ ಕಚೇರಿಯಲ್ಲಿ ಕಸ ಸುರಿದು ಪ್ರತಿಭಟನೆ

7

ಪಂಚಾಯಿತಿ ಕಚೇರಿಯಲ್ಲಿ ಕಸ ಸುರಿದು ಪ್ರತಿಭಟನೆ

Published:
Updated:
Deccan Herald

ನೆಲಮಂಗಲ: ‘ಮೂರು ವರ್ಷಗಳಿಂದಲೂ ವಸತಿ ಪ್ರದೇಶದ ಕಸ ವಿಲೇವಾರಿ ಮಾಡದೆ ಕಾಲಹರಣ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಗ್ರಾಮಸ್ಥರು ಬೀದಿಯಲ್ಲಿದ್ದ ಕಸವನ್ನು ವಾಜರಹಳ್ಳಿ ಪಂಚಾಯಿತಿ ಕಚೇರಿಯೊಳಗೆ ಸುರಿದು ಪ್ರತಿಭಟನೆ ನಡೆಸಿದರು.

ವಾಜರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳು ಇಲ್ಲ. ಪ್ರಮುಖವಾಗಿ ಕಸ ವಿಲೇವಾರಿ ಬಗ್ಗೆ ಗಮನ ಹರಿಸದ ಅಧಿಕಾರಿ ಮತ್ತು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

‘ಹಲವು ಬಾರಿ ಪಂಚಾಯಿತಿ ಗಮನಕ್ಕೆ ತಂದರೂ ಅವರು ಸುಳ್ಳು ಹೇಳುತ್ತಾರೆ. ನಮ್ಮಿಂದ ಕಂದಾಯ ವಸೂಲಿ ಮಾಡುತ್ತಿದ್ದರೂ, ಕಸ ವಿಲೇವಾರಿ ಮಾಡದೇ,  ರಾತ್ರಿ ವೇಳೆ ಬೆಂಕಿ ಹಾಕುತ್ತಾರೆ. ಬೆಳಗಿನವರೆಗೂ ಬೆಂಕಿ ಉರಿಯುತ್ತಿರುತ್ತದೆ. ಇದರಿಂದ ಆವರಿಸುವ ಹೊಗೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಗ್ರಾಮಸ್ಥರು ದೂರಿದರು.

ಜನರನ್ನು ಸಮಾಧಾನ ಪಡಿಸಿದ ಅಧ್ಯಕ್ಷೆ ಮಂಜುಳಾ ಮತ್ತು ಅಭಿವೃದ್ಧಿ ಅಧಿಕಾರಿ ಪ್ರಶಾಂತ್‌, ತ್ವರಿತವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !