ಗುರುವಾರ , ನವೆಂಬರ್ 14, 2019
18 °C

ಕನ್ನಡಿಗನಿಗೆ ಉತ್ತರಪ್ರದೇಶದ ‘ಸಾಹಿತ್ಯ ಸೌಹಾರ್ದ ಸನ್ಮಾನ’ ಪುರಸ್ಕಾರ

Published:
Updated:
Prajavani

ಮೈಸೂರು: ಕನ್ನಡ, ಹಿಂದಿ ಭಾಷಾ ಸಾಹಿತ್ಯ ಹಾಗೂ ಅನುವಾದ ಕ್ಷೇತ್ರದಲ್ಲಿ ಸಾಹಿತಿ ಡಾ.ಎಚ್‌.ಎಂ.ಕುಮಾರಸ್ವಾಮಿ ಸಾಧನೆ ಪರಿಗಣಿಸಿ, ಉತ್ತರಪ್ರದೇಶ ಹಿಂದಿ ಸಂಸ್ಥಾನ 2018ನೇ ಸಾಲಿನ ‘ಸಾಹಿತ್ಯ ಸೌಹಾರ್ದ ಸನ್ಮಾನ’ ಪುರಸ್ಕಾರ ಘೋಷಿಸಿದೆ.

ಇದು ರಾಷ್ಟ್ರಮಟ್ಟದ ಪುರಸ್ಕಾರ. ₹ 2 ಲಕ್ಷ ನಗದು, ಪ್ರಶಸ್ತಿ ಫಲಕ ಹೊಂದಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್‌ನಲ್ಲಿ ಈ ಪುರಸ್ಕಾರವನ್ನು ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)