ಸರ್ವರ ಸಮಾನತೆಯೇ ಕೇಂದ್ರ ಸರ್ಕಾರದ ಉದ್ದೇಶ

7
ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅಭಿಮತ

ಸರ್ವರ ಸಮಾನತೆಯೇ ಕೇಂದ್ರ ಸರ್ಕಾರದ ಉದ್ದೇಶ

Published:
Updated:
ಸೇಡಂ ತಾಲ್ಲೂಕು ಇಂದ್ರಾನಗರ ಗ್ರಾಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಶಾಸಕ ರಾಜುಕುಮಾರ ಪಾಟೀಲ ತೆಲ್ಕೂರ ಸಿಲಿಂಡರ್ ವಿತರಿಸಿದರು

ಸೇಡಂ: ‘ಗ್ರಾಮೀಣ ಭಾಗದಲ್ಲಿರುವ ಜನರು ಇಂದಿಗೂ ಕಟ್ಟಿಗೆ ಕಡಿದು ಅರಣ್ಯ ನಾಶ ಮಾಡುವುದರ ಜೊತೆಗೆ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.ಆದ್ದರಿಂದ ದೇಶದ ಕಡುಬಡವರಿಗೂ ಸಹ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಸಮಾನತೆ ತರುತ್ತಿದ್ದಾರೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ತಾಲ್ಲೂಕಿನ ಇಂದಿರಾ ನಗರ ಗ್ರಾಮದಲ್ಲಿ ಈಚೆಗೆ ನಡೆದ ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೊಗೆ ಮುಕ್ತ ಗ್ರಾಮ ಮಾಡಿ. ಪ್ರತಿಯೊಬ್ಬರು ನಿತ್ಯ ಬದುಕಿನ ಕಣ್ಣೀರನ್ನು ಒರೆಸುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಅನೇಕರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಇನ್ನುಳಿದ ಫಲಾನುವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿಯೊಬ್ಬರಿಗೂ ಸಹ ಸಿಲಿಂಡರ್ ವಿತರಿಸುವ ಪ್ರಕ್ರಿಯೆ ಇದೆ. ಪ್ರಜ್ಞಾವಂತರು ಅನಕ್ಷರಸ್ಥ ಜನರಿಗೆ ಇದರ ಕುರಿತು ತಿಳಿಸಬೇಕು’ ಎಂದರು.

‘ಸೂರಿಲ್ಲದವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದ್ದಾರೆ. ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದ್ದು, ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಂಕ್‌ಗಳಲ್ಲಿ ವಿಮಾ ಯೋಜನೆ, ಬೆಳೆ ವಿಮೆ ಸೇರಿದಂತೆ ಅನೇಕ ನೂತನ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರೆಡ್ಡಿ ದೇಶಮುಖ, ಗೋವಿಂದ ಮುಡಗುಲ್, ನಾಗಭೂಷಣರೆಡ್ಡಿ ಪಾಟೀಲ, ವೆಂಕರೆಡ್ಡಿ ಪಾಟೀಲ, ಗೋವರ್ಧನ, ಸಾಯಪ್ಪ, ಬನ್ನಪ್ಪ ಕುಂಬಾರ, ರಮೇಶ ಕಡಗಂಚಿ, ವೆಂಕಟ, ಯಲ್ಲಪ್ಪ ಪೂಜಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !